Sunday, July 3, 2022

Latest Posts

ಅಜ್ಞಾನವೇ ಮೂಢನಂಬಿಕೆಗೆ ಕಾರಣ: ಎಸ್.ಕೆ. ಕಾಂತಾ

ಹೊಸದಿಗಂತ ವರದಿ,ಕಲಬುರಗಿ:

ಮೂಢನಂಬಿಕೆಗೆ ನಮ್ಮಲ್ಲಿರುವ ಅಜ್ಞಾನವೇ ಕಾರಣವಾಗಿದ್ದು, ಸಮಾಜದ ಸ್ವಾಸ್ಥ್ಯ ಹದಗೆಡಲು ಉಳ್ಳವರೇ ನೇರ ಹೊಣೆಗಾರರು ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಹೇಳಿದರು.

ನಗರದ ಹೊರ ವಲಯದ ಶರಣಸಿರಸಗಿಯ ಬಸವ ಭೂಮಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಗೌರವ ಸತ್ಕಾರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಓದು, ಬರಹ ಬಲ್ಲವರೇ ಮೂಢನಂಬಿಕೆಗೆ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿ ಎಂದು ತಿಳಿಸಿದರು.

ಸಮಾಜದಲ್ಲಿನ ಅಜ್ಞಾನ, ಅಂಧಕಾರ ಹೋಗಲಾಡಿಸುವಲ್ಲಿ ಯುವಕರ ಮೇಲೆ ಹೆಚ್ಚಿನ ಜಬಾಬ್ದಾರಿಯಿದ್ದು, ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಚನಗಳಲ್ಲಿ ವೈಜ್ಞಾನಿಕತೆ ವಿಷಯ ಕುರಿತು ಮಾತನಾಡಿದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಪೆÇ್ರ. ಸಂಜಯ ಮಾಕಲ್, ಇತರ ಧರ್ಮಗಳಿಗೆ ದೇವರು ಕೇಂದ್ರಬಿಂದುವಾದರೆ, ಶರಣ ಧರ್ಮಕ್ಕೆ ಈ ಬದುಕು ಕೇಂದ್ರಬಿಂದುವಾಗಿತ್ತು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಕಿತ್ತೆಸೆಯಲು ಪ್ರಯತ್ನಿಸಿದ ಶರಣರು ಅಪ್ಪಟ ವಿಜ್ಞಾನಿಗಳಾಗಿದ್ದರು ಎಂದರು.
ಪಟ್ಟಭದ್ರರರು ಸಮಾಜದ ಅಜ್ಞಾನದ ಮೇಲೆಯೇ ಆಳ್ವಿಕೆ (ಸವಾರಿ) ನಡೆಸುತ್ತಿದ್ದು, ಜನರು ಈ ವ್ಯವಸ್ಥೆಯಿಂದ ಹೊರ ಬಂದು ಬಸವಾದಿ ಶರಣರು ಬದುಕಿ ಬೋಧಿಸಿದ ವೈಜ್ಞಾನಿಕ ತಳಹದಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡು ಸಂತೃಪ್ತಿಯ ಜೀವನ ನಡೆಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಆರ್.ಜಿ. ಶೆಟಗಾರ, ಪರಿಷತ್ ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾವ ಅವಂಟಿ ವೇದಿಕೆಯಲ್ಲಿದ್ದರು.
ಇದೇವೇಳೆಯಲ್ಲಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಪತ್ರಕರ್ತ ಕುಮಾರ ಬುರಡಿಕಟ್ಟಿ, ಸುಮೇಧ ಪ್ರಕಾಶನದ ಡಾ. ದತ್ತಾತ್ರಯ ಇಕ್ಕಳಕಿ, ಚನ್ನಬಸವ ಬಾಲಪಗೋಳ್, ಅಪ್ಪಾರಾವ ಅಕ್ಕೋಣಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ನೇತಾಜಿ ಸುಸುಭಾಷ್ಚಂದ್ರ ಬೋಸ್ ಹಾಗೂ ವೈಜ್ಞಾನಿಕತೆ ಕುರಿತು ಪುಟ್ಟ ಬಾಲಕರಾದ ಪ್ರಮಥ ಸತ್ಯಂಪೇಟೆ ಹಾಗೂ ಪ್ರಣವ ಸತ್ಯಂಪೇಟೆ ಮಾಡಿದ ಭಾಷಣಗಳು ಗಮನಸೆಳೆದವು.

ಶರಣಸಿರಸಗಿ ಹಾಗೂ ಸುತ್ತಲಿನ ಗ್ರಾಮದ 22 ಜನ ಯುವಕರು ರಕ್ತದಾನ ಮಾಡಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ನಿರೂಪಿಸಿದರು. ಸಂಗಣ್ಣ ಎಸ್. ಗುಳಗಿ ಸ್ವಾಗತಿಸಿದರು. ವಿಶ್ವನಾಥ ಮಂಗಲಗಿ ವಂದಿಸಿದರು.
ಹಣಮಂತ್ರಾಯ ಐನೂಲಿ, ಸತೀಶ ಸಜ್ಜನ, ಎಲ್. ಎಸ್. ಬೀದಿ, ಶಾಂತಕುಮಾರ ಮಳಖೇಡ, ಗಿರಿಮಲ್ಲಪ್ಪ ವಳಸಂಗ, ಹಣಮಂತರಾಯ ಕುಸನೂರ, ಬಸವರಾಜ ಜನಕಟ್ಟಿ, ಸಂತೋಷ ಹೂಗಾರ, ಶಂಕರಪ್ಪ ಮಣ್ಣೂರ, ಬಸವರಾಜ ಚಾಂದಕವಟೆ, ಕಮಲಾಬಾಯಿ, ಸಾಕ್ಷಿ, ಬಸವಪ್ರಭು, ಶಿವಕುಮಾರ ಶಾಬಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss