ಅಂಕೋಲಾದಲ್ಲಿ ಅಕ್ರಮ ಗೋವಾ ಮದ್ಯ ವಶ: ಓರ್ವನ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಅಂಕೋಲಾ:

ಕಾರಿನಲ್ಲಿ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಂಕೋಲಾ ಪೊಲೀಸರು ಅಕ್ರಮ ಗೋವಾ ಸರಾಯಿ ವಶಪಡಿಸಿಕೊಂಡು ಓರ್ವನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿತ ಕಾರವಾರ ಮಾಜಾಳಿ ಚೆಕ್ ಪೋಸ್ಟ್ ಬಳೆಯ ನಿವಾಸಿ.

ಜ್ಞಾನೇಶ್ವರ ಸುರೇಶ ಕಿಂದಳಕರ ಎಂಬಾತ ಜಿ.ಎ08/ಎನ್ 3712 ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಗೋವಾ ರಾಜ್ಯದಲ್ಲಿ ತಯಾರಾದ ಕರ್ನಾಟಕ ರಾಜ್ಯದಲ್ಲಿ ಸಾಗಾಟ ಮತ್ತು ಮಾರಾಟಕ್ಕೆ ನಿಷೇದವಿರುವ 750 ಎಂ.ಎಲ್ ಗೋವಾ ಕೋಕೊನಟ್ ಫೆನ್ನಿಯ 520 ಬಾಟಲಿಗಳು ಹಾಗೂ 180 ಎಂ.ಎಲ್ ನ ಲೈಟ್ ಹೌಸ್ ವಿಸ್ಕಿಯ 1152 ಬಾಟಲಿಗಳನ್ನು ಸೇರಿ ಸುಮಾರು 87152 ರೂಪಾಯಿ ಮೌಲ್ಯದ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಬೊಬ್ರವಾಡ, ನದಿಭಾಗ ಬಳಿ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ರಮ ಸರಾಯಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!