ಐಎಂಎ ಬಹುಕೋಟಿ ವಂಚನೆ ಪ್ರಕರಣ: ವಿದೇಶಕ್ಕೆ ತೆರಳಲು ರೋಷನ್ ಬೇಗ್​​ಗೆ ಸಿಕ್ಕಿತು ಅನುಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಇದೀಗ ವಿದೇಶಕ್ಕೆ ತೆರಳಲು ಷರತ್ತುಬದ್ಧ ಅನುಮತಿ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ದುಬೈನಲ್ಲಿ ತಮ್ಮ ಸೊಸೆಯ ಸಹೋದರನ ವಿವಾಹವಿರುವ ಹಿನ್ನೆಲೆಯಲ್ಲಿ ತೆರಳಲು ಅನುಮತಿ ಕೋರಿ ರೋಷನ್ ಬೇಗ್ ಅರ್ಜಿ ಸಲ್ಲಿಸಿದ್ದರು.
ಬೇಗ್ ಅರ್ಜಿ ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ವಿಮಾನ ಬೋರ್ಡಿಂಗ್ ಪಾಸ್ ಹಾಜರುಪಡಿಸಬೇಕು ಹಾಗೂ ಮೊಬೈಲ್ ಸಂಖ್ಯೆ, ಪ್ರಯಾಣದ ವಿವರ ಸಲ್ಲಿಸಬೇಕೆಂದು ಸೂಚಿಸಿತು.

ಅಲ್ಲದೇ, ನ್ಯಾಯಾಲಯ ಆದೇಶಿಸಿದರೆ ಪ್ರಯಾಣ ಮೊಟಕುಗೊಳಿಸಿ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ 15 ದಿನಗಳ ಅವಧಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!