ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿಯ ವೇಳೆಗೆ ಯುವನಿಧಿ ಯೋಜನೆ ಜಾರಿಗೆ ತರುತ್ತೇವೆ. ಗ್ಯಾರಂಟಿಗಳು ತಲುಪಿದೆಯೋ ಇಲ್ಲವೋ ಎಂದು ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗುತ್ತದೆ. ನ. 28 ರಂದು ಕಾಂಗ್ರೆಸ್ ಸಂಸ್ಥಾಪಕರ ದಿನದಂದು ಸಮಿತಿ ರಚನೆ ಮಾಡುತ್ತೇನೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನಾಚರಣೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬಿಜೆಪಿ ಜೆಡಿಎಸ್ ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು
ಪ್ರತಿ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪಿದೆಯೇ ಅಥವಾ ಇಲ್ಲವೇ ಏನಾದರೂ ಬದಲಾವಣೆ ಮಾಡಬೇಕಾ ಅಂತ ಮಾಹಿತಿ ಸಂಗ್ರಹಿಸಬೇಕು. ಬಿಜೆಪಿ ಜೆಡಿಎಸ್ ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆಂದು ಮನೆ ಮನೆಗೆ ಭೇಟಿ ವೇಳೆ ಜನರಿಗೆ ಮನವರಿಗೆ ಮಾಡಿಕೊಡಬೇಕು. ಕೈ ಅಧಿಕಾರದಲ್ಲಿ ಇರುವವರಿಗೆ ಗ್ಯಾರಂಟಿಗಳನ್ನು ವಿಥ್ ಡ್ರಾ ಮಾಡಲ್ಲ ಗ್ಯಾರೆಂಟಿ ಯೋಜನೆಗಳನ್ನು ಬದಲಾವಣೆ ಮಾಡಲ್ಲ ಇದು ನಿಶ್ಚಿತ ಎಂದು ತಿಳಿಸಿದರು.
ನವೆಂಬರ್ 17ರ ವರೆಗೆ ಶಕ್ತಿ ಯೋಜನೆ ಅಡಿ 100 ಕೋಟಿ ಟಿಕೆಟ್ ನೀಡಲಾಗಿದೆ ಎಂದು ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.ನಮ್ಮ ಮುಂದಿನ ಗುರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಗೆಲ್ಲುವುದು. ಕಳೆದ ಬಾರಿಯಂತೆ ರಾಜ್ಯದಲ್ಲಿ ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮತ್ತಷ್ಟು ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದರು.
ಬಿಜೆಪಿ ಜೆಡಿಎಸ್ ಗೆ ಮತ ಹಾಕಿದರೆ ಗ್ಯಾರಂಟಿಗಳನ್ನ ರದ್ದು ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗುತ್ತೆ ಅಂತ ಬಿಜೆಪಿ ಹೇಳುತ್ತಿತ್ತು.ಈಗ ಬಿಜೆಪಿ ಅವರೆ ಗ್ಯಾರಂಟಿ ಯೋಜನೆ ನೀಡಲು ಹೊರಟಿದ್ದಾರೆ. ಹಾಸನಾಂಬೆ ಜಾತ್ರೆ ವೇಳೆ ದೇವಸ್ಥಾನಕ್ಕೆ 14 ಕೋಟಿ ಆದಾಯ ಬಂದಿದೆ.ತಾಂತ್ರಿಕ ಕಾರಣದಿಂದ 7% ಜನರಿಗೆ ಗೃಹಲಕ್ಷ್ಮಿ ಯೋಜನೆ, ಹಣ ತಲುಪಿಲ್ಲ. ಈ ತಿಂಗಳು ಅಥವಾ ಡಿಸೆಂಬರ್ ನಲ್ಲಿ ಯುವನಿಧಿ ಯೋಜನೆ ಜಾರಿ ಮಾಡಲಾಗುತ್ತದೆ ಅಥವಾ ಜನವರಿಯ ವೇಳೆಗೆ ಯುವನಿಧಿ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದರು.