ಹೊಸ ದಿಗಂತ ಡಿಜಿಟಲ್ ಡೆಸ್ಕ್:
72ನೇ ವಿಶ್ವ ಸುಂದರಿ 2023 ಸ್ಪರ್ಧೆಯು ಸ್ಯಾನ್ ಸಾಲ್ವಡಾರ್‌ನಲ್ಲಿ ನಡೆದಿದ್ದು, ಈ ವರ್ಷದ ‘ಮಿಸ್ ಯೂನಿವರ್ಸ್’ ಕಿರೀಟವನ್ನು ನಿಕರಾಗುವಾದ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮದಾಗಿಸಿಕೊಂಡರು.
ಈ ವರ್ಷವೂ ಸುಮಾರು 84 ದೇಶಗಳ ಸೌಂದರ್ಯ ರಾಣಿಯರು ಸ್ಪರ್ಧಿಸಿದ್ದರು. ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಇತರ ಸುಂದರಿಯರೊಂದಿಗೆ ಸ್ಪರ್ಧಿಸುವ ಮೂಲಕ ವಿಶ್ವ ಸುಂದರಿ 2023ರ ಕಿರೀಟವನ್ನು ಗೆದ್ದರು.
ಇಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿಕರಾಗುವಾದ ಶೆಯ್ನಿಸ್ ಪಲಾಸಿಯೊಸ್ 2023 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ವಿಜೇತ ಎಂದು ಘೋಷಿಸಲಾಯಿತು. ಇನ್ನು ಚಂಡೀಗಢದ 23 ವರ್ಷದ ಶ್ವೇತಾ ಶಾರದಾ ಭಾರತ ದೇಶದ ಪರವಾಗಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು.
ಶ್ವೇತಾ ಶಾರದಾ ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ ಯುನಿವರ್ಸ್ 2023 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟೆಡ್, ಟಾಪ್ 5 ಮಿಸ್ ಫೋಟೋಜೆನಿಕ್, ಟಾಪ್ 6 ಮಿಸ್ ರ್‍ಯಾಂಪ್ ವಾಕ್ ಟೈಟಲ್ ಕೂಡ ಇವರು ಗೆದ್ದುಕೊಂಡಿದ್ದಾರೆ.