ಇಮ್ರಾನ್ ಖಾನ್ ಫೋನ್ ಸೆಕ್ಸ್ ಆಡಿಯೋ ಕ್ಲಿಪ್ ಸೋರಿಕೆ: ನಕಲಿ ಎಂದ ಪಿಟಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮಹಿಳೆಯೊದಿಗೆ ನಡೆಸಿದ ಸೆಕ್ಸ್‌ ಸಂಭಾಷಣೆ ಕ್ಲಿಪ್ ವೈರಲ್‌ ಆಗಿ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಆದರೆ ಅದು ನಕಲಿ ಎಂದು ಇಮ್ರಾನ್‌ ಪಕ್ಷ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ತಳ್ಳಿಹಾಕಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಎಂದು ಹೇಳಲಾದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ
ಸೋರಿಕೆಯಾದ ಎರಡು ಆಡಿಯೋ ಕ್ಲಿಪ್ ನಲ್ಲಿ ಇಮ್ರಾನ್ ಖಾನ್ ಮಹಿಳೆಯೊಂದಿಗೆ ಖಾಸಗಿಯಾಗಿ ಅಶ್ಲೀಲವಾಗಿ ಮಾತನಾಡುತ್ತಿರುವುದನ್ನು ಕೇಳಬಹುದು. ವೈರಲ್ ಆಗಿರುವ ಎರಡು ಆಡಿಯೋ ಕ್ಲಿಪ್‌ಗಳಲ್ಲಿ ಒಂದು ಹಳೆಯದು ಎಂದು ಹೇಳಲಾಗಿದೆ. ಇತ್ತೀಚಿನದು ಎಂದು ಹೇಳಲಾದ ಎರಡನೇ ಕ್ಲಿಪ್‌ನಲ್ಲಿ, ಇಮ್ರಾನ್ ತನ್ನ ಬಳಿಗೆ ಬರಲು ಮಹಿಳೆಯನ್ನು ಕೇಳುತ್ತಾರೆ. ಮಹಿಳೆ ನಿರಾಕರಿಸಿದಾಗ, ಇಮ್ರಾನ್ ತಾನು ಹೇಳಿದಂತೆ ಮಾಡುವಂತೆ ಒತ್ತಾಯಿಸುತ್ತಾರೆ.
ವೈರಲ್ ಆದ ಆಡಿಯೋ ಇಮ್ರಾನ್ ಖಾನ್ ಅವರದ್ದೇ ಎಂದು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಹಾಗೂ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಆರೋಪಿಸಿವೆ. ಸಂಭಾಷಣೆಯ ಶೈಲಿಯಿಂದ ಅದು ಇಮ್ರಾನ್ ಖಾನ್ ಅವರದ್ದೇ ಎಂದು ಸಾಬೀತಾಗಿದೆ ಎಂದು ಅವು ಹೇಳಿವೆ. ಆದರೆ ಇಮ್ರಾನ್ ಪಕ್ಷ ಪಿಟಿಐ ಈ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದು, ಆಡಿಯೊ ಸೋರಿಕೆಯು ಇಮ್ರಾನ್‌ ರನ್ನು ರಾಜಕೀಯವಾಗಿ ಹಣಿಯುವ ಪ್ರಯತ್ನವಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!