ಪತಂಜಲಿ ಸೇರಿದಂತೆ ಹಲವು ಭಾರತೀಯ ಕಂಪನಿಗಳ ಔಷಧ ರಫ್ತು ನಿಷೇಧಿಸಿದ ನೇಪಾಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಸೇರಿಸಿ 14 ಭಾರತೀಯ ಔಷಧ ಕಂಪನಿಗಳನ್ನು ನೇಪಾಳ ಬ್ಯಾನ್ ಮಾಡಿದೆ.

ಈ 14 ಕಂಪನಿಗಳ ಔಷಧ ಆಮದನ್ನು ನೇಪಾಳ ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಉತ್ಪಾದನಾ ಗುಣಮಟ್ಟಗಳನ್ನು ಈ ಸಂಸ್ಥೆಗಳು ಪಾಲಿಸಿಲ್ಲ ಹಾಗಾಗಿ ಇವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ನೇಪಾಳ ಹೇಳಿದೆ.

ಈ ಕಂಪನಿಗಳ ಔಷಧ ಪೂರೈಕೆ ಮಾಡುವ ಸ್ಥಳೀಯ ಏಜೆಂಟ್‌ಗಳಿಗೆ ನೋಟಿಸ್ ನೀಡಲಾಗಿದ್ದು, ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಪಟ್ಟಿಯಲ್ಲಿ ಇರುವ ಕಂಪನಿಗಳಿಂದ ತಯಾರಾದ ಔಷಧಗಳನ್ನು ನೇಪಾಳದಲ್ಲಿ ಮಾರುವಂತಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಯಾವೆಲ್ಲಾ ಕಂಪನಿಗಳು ಬ್ಯಾನ್ ?

  • ದಿವ್ಯಾ ಫಾರ್ಮಸಿ
  • ಮ್ಯಾಕರ್ ಲ್ಯಾಬೋರೇಟರೀಸ್
  • ರೇಡಿಯಂಟ್ ಪೇರೆಂಟರ್ಲ್ಸ್
  • ಮರ್ಕ್ಯುರಿ ಲ್ಯಾಬೋರೇಟರೀಸ್
  • ಅಲಯನ್ಸ್ ಬಯೋಟೆಕ್
  •  ಕ್ಯಾಪ್​ಟ್ಯಾಬ್ ಬಯೋಟೆಕ್
  • ಡಯಲ್ ಫಾರ್ಮಾಸ್ಯೂಟಿಕಲ್ಸ್
  • ಅಗ್ಲೋವ್​​ಮೆಡ್ ಲಿಮಿಟೆಡ್
  • ಜಿಎಲ್​​ಎಸ್ ಫಾರ್ಮಾ
  • ಕಾನ್ಸೆಪ್ಟ್ ಫಾರ್ಮಾಸ್ಯೂಟಿಕಲ್ಸ್
  • ಶ್ರೀ ಆನಂದ್ ಲೈಫ್ ಸೈನ್ಸಸ್
  • ಐಪಿಸಿಎ ಲ್ಯಾಬೋರೇಟರೀಸ್
  • ಕ್ಯಾಡಿಲಾ ಹೆಲ್ತ್​ಕೇರ್
  • ಯುನಿಜೂಲ್ಸ್ ಲೈಫ್ ಸೈನ್ಸ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!