ಭಾರತೀಯ ಆರ್ಥಿಕತೆಗಿಂತ 2.4 ಪಟ್ಟು ವೇಗವಾಗಿ ಬೆಳೆದಿದೆ ಭಾರತದ ಡಿಜಿಟಲ್‌ ಆರ್ಥಿಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಡಿಜಿಟಲ್ ಆರ್ಥಿಕತೆಯು 2014 ಮತ್ತು 2019 ರ ನಡುವೆ ಆರ್ಥಿಕತೆಗಿಂತ 2.4 ಪಟ್ಟು ವೇಗವಾಗಿ ಬೆಳೆದು ಸುಮಾರು 62.4 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಬಿಡುಗಡೆ ಮಾಡಿದ ಇತ್ತೀಚಿನ ಬುಲೆಟಿನ್‌ನಲ್ಲಿ ಪ್ರಕಟವಾದ ಲೇಖನವೊಂದು ತಿಳಿಸಿದೆ.

ಭಾರತದ ಡಿಜಿಟಲ್ ಆರ್ಥಿಕತೆಯ ಗಾತ್ರವು 2014 ರಲ್ಲಿ 107.7 ಶತಕೋಟಿ ಡಾಲರ್‌ ನಿಂದ 2019 ರಲ್ಲಿ 222.5 ಶತಕೋಟಿ ಡಾಲರ್‌ ಗೆ ಬೆಳೆದಿದೆ. ಡಾಲರ್‌ ಪರಿಭಾಷೆಯಲ್ಲಿ ಭಾರತದ ಡಿಜಿಟಲ್ ಆರ್ಥಿಕತೆಯು 2014 ಮತ್ತು 2019 ರ ನಡುವೆ ಶೇಕಡಾ 15.62 ರ ಬೆಳವಣಿಗೆ ದರವನ್ನು ದಾಖಲಿಸಿದೆ. ಆದರೆ ಭಾರತದ ಆರ್ಥಿಕತೆಯು (GVA) ವಾರ್ಷಿಕವಾಗಿ 6.59 ಶೇಕಡಾ ಬೆಳವಣಿಗೆ ದರ ದಾಖಲಿಸಿದೆ.

ಭಾರತದ ಡಿಜಿಟಲ್ ಆರ್ಥಿಕತೆಯು ಭಾರತದ ಆರ್ಥಿಕತೆಗಿಂತ 2.4 ಪಟ್ಟು ವೇಗವಾಗಿ ಬೆಳೆದಿದೆ ಎಂದು ಇದು ತೋರಿಸುತ್ತದೆ ಎಂದು ಆರ್‌ಬಿಐನ ಆರ್ಥಿಕ ಮತ್ತು ನೀತಿ ಸಂಶೋಧನಾ ವಿಭಾಗದ ಧೀರೇಂದ್ರ ಗಜ್ಭಿಯೆ, ರಶಿಕಾ ಅರೋರಾ, ಅರ್ಹಮ್ ನಹರ್, ರಿಗ್ಜೆನ್ ಯಾಂಗ್‌ಡೋಲ್ ಮತ್ತು ಇಶು ಠಾಕೂರ್ ಬರೆದ ಲೇಖನ ಹೇಳಿದೆ.

ಭಾರತದ ಪ್ರಮುಖ ಡಿಜಿಟಲ್ ಆರ್ಥಿಕತೆಯ ಒಟ್ಟು ಮೌಲ್ಯ ಸೇರ್ಪಡೆಯು (ಹಾರ್ಡ್‌ವೇರ್, ಸಾಫ್ಟ್‌ವೇರ್ ಪಬ್ಲಿಷಿಂಗ್, ವೆಬ್ ಪಬ್ಲಿಷಿಂಗ್, ಟೆಲಿಕಮ್ಯುನಿಕೇಶನ್ ಸೇವೆಗಳು ಮತ್ತು ವಿಶೇಷ ಮತ್ತು ಬೆಂಬಲ ಸೇವೆಗಳು) 2014 ರಲ್ಲಿ 5.4 ಪ್ರತಿಶತದಿಂದ 2019 ರಲ್ಲಿ ಶೇಕಡಾ 8.5 ಕ್ಕೆ ಏರಿದೆ.

ಕೋರ್ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯ ದರವು ಇಡೀ ಆರ್ಥಿಕತೆಯ ವಾರ್ಷಿಕ ಬೆಳವಣಿಗೆಯ ದರಕ್ಕಿಂತ 2.4 ಪಟ್ಟು ವೇಗವಾಗಿತ್ತು ಎಂದು ಈ ಲೇಖನ ಉಲ್ಲೇಖಿಸಿದೆ. ”ಆವಿಷ್ಕಾರವನ್ನು ಉತ್ತೇಜಿಸುವ ಮೂಲಕ, ದಕ್ಷತೆಯನ್ನು ಉತ್ಪಾದಿಸುವ ಮತ್ತು ಸೇವೆಗಳನ್ನು ಸುಧಾರಿಸುವ ಮೂಲಕ ಡಿಜಿಟಲ್ ಆರ್ಥಿಕತೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮೇಕ್ ಇನ್ ಇಂಡಿಯಾ, ಪಿಎಲ್‌ಐ ಯೋಜನೆಗಳಂತಹ ನೀತಿಗಳು ಭಾರತಕ್ಕೆ ಮುಂದಿನ ಬೆಳವಣಿಗೆ ನಿರ್ಣಾಯಕವಾಗಿವೆ. ” ಎಂದು ಅದು ಹೇಳಿದೆ.

ಲೇಖನದ ಪ್ರಕಾರ, ಡಿಜಿಟಲ್ ಅವಲಂಬಿತ ಆರ್ಥಿಕತೆಯು 2019 ರಲ್ಲಿ ಒಟ್ಟಾರೆ ಆರ್ಥಿಕತೆಯ ಶೇಕಡಾ 22.4 ರಷ್ಟಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!