2022-23ರಲ್ಲಿ‌ ಭಾರತದಿಂದ ರಫ್ತಾದ ಮೊಬೈಲ್ ಗಳ ಪೈಕಿ ಐಫೋನ್‌ಗಳದ್ದೇ ಹೆಚ್ಚಿನ ಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022-23ನೇ ವರ್ಷದಲ್ಲಿ ಇದುವರೆಗೆ ಭಾರತದಿಂದ ರಫ್ತಾದ ಸ್ಮಾರ್ಟ್‌ ಫೋನ್‌ ಗಲ ಪೈಕ್ಇ ಹೆಚ್ಚಿನ ಪಾಲು ಐಫೋನ್‌ ಗಳದ್ದಾಗಿದ್ದು ಒಟ್ಟೂ ಸ್ಮಾರ್ಟ್‌ ಫೋನ್‌ ಗಳ ರಫ್ತಿನಲ್ಲಿ 40 ಶೇಕಡಾ ಪಾಲು ಐಫೋನ್‌ ಗಳದ್ದಾಗಿದೆ. ಉತ್ಪಾದನೆ ಆಧರಿತ ಉತ್ತೇಜನದ ಅಡಿಯಲ್ಲಿ ಭಾರತವು ದೇಶೀಯ ಉತ್ಪಾದನೆಗೆ ಬೆಂಬಲ ನೀಡುತ್ತಿದ್ದು ಭಾರತವು ಈಗಾಗಲೇ 2022 ರ ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿ 50,000 ಸಾವಿರ ಕೋಟಿ ರೂಪಾಯಿಗಳ ರಫ್ತು ಗುರಿ ತಲುಪಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 110 ಶೇಕಡಾದಷ್ಟು ರಫ್ತು ಹೆಚ್ಚಾಗಿದೆ.

ರಫ್ತುಗಳಲ್ಲಿ ಮೂರು ಆಪಲ್‌ ತಯಾರಕರಾದ ಫಾಕ್ಸ್‌ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಹಾಗು ಸ್ಯಾಮ್‌ಸಂಗ್‌ ಕಂಪನಿಗಳು ಅತಿ ಹೆಚ್ಚಿನ ಕೊಡುಗೆ ನೀಡಿವೆ. ಭಾರತದಿಂದ ರಫ್ತಾಗುವ ಶೇಕಡಾ 40 ರಷ್ಟು ಸ್ಮಾರ್ಟ್‌ಫೋನ್‌ಗಳು ಐಫೋನ್‌ಗಳಾಗಿವೆ ಎಂದು ಜಿ 20 ಶೆರ್ಪಾ ಕೂಡ ಆಗಿರುವ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ತನ್ನ ಆತ್ಮನಿರ್ಭರ್ ಭಾರತ ಯೋಜನೆಯ ಭಾಗವಾಗಿ, ಸರ್ಕಾರವು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು 14 ವಲಯಗಳಲ್ಲಿ ಉತ್ಪಾದನೆ ಆಧರಿತ ಉತ್ತೇಜನ (PLI) ಯೋಜನೆಗಳನ್ನು ಪ್ರಾರಂಭಿಸಿತು.

ಮಂಗಳವಾರ, ಫಾಕ್ಸ್‌ಕಾನ್ ಇಂಡಿಯಾ ಮತ್ತು ಪ್ಯಾಜೆಟ್ ಎಲೆಕ್ಟ್ರಾನಿಕ್ಸ್ ಈ ಎರಡು ಕಂಪನಿಗಳಿಗೆ ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿಯಲ್ಲಿ ಮೊಬೈಲ್ ಉತ್ಪಾದನೆಗೆ 357.17 ಕೋಟಿ ರೂ. ಮತ್ತು 58.29 ಕೋಟಿ ರೂ. ಪ್ರೋತ್ಸಾಹಕಗಳನ್ನು ಸರ್ಕಾರ ಅನುಮೋದಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!