ರಷ್ಯಾ ಆಕ್ರಮಣದ ವಿರುದ್ಧ ಉಕ್ರೇನ್ ಗೆ ಜರ್ಮನಿ ಬೆಂಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ನಡೆಸುತ್ತಿರುವ ದಾಳಿ ವಿರೋಧಿಸಿ ಹೋರಾಡುತ್ತಿರುವ ಸಣ್ಣ ರಾಷ್ಟ್ರ ಉಕ್ರೇನ್ ಗೆ ಜರ್ಮನಿ ಸಹಾಯ ಹಸ್ತ ಚಾಚಿದೆ
ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯ ಉಕ್ರೇನ್ ಗೆ 1ಸಾವಿರ ಟ್ಯಾಂಕರ್ ವಿರೋಧಿ ಶಸ್ತ್ರಾಸ್ತ್ರಗಳು, 500 ಸ್ಟಿಂಗರ್ ಗಳು ಸೇರಿ ಹಲವು ಯುದ್ಧ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಘೋಷಿಸಿದೆ.
ರಷ್ಯಾದ ಆಕ್ರಾಮಣ ವಿರುದ್ಧ ಹೋರಾಡಲು ಹಲವು ಮಿತ್ರರಾಷ್ಟ್ರಗಳು ಮುಂದೆ ಬಂದಿದ್ದು, ಜರ್ಮನಿ ಈಗಾಗಲೇ 5 ಸಾವಿರ ಹೆಲ್ಮೆಟ್ ಗಳು, 14 ಶಸ್ತ್ರಸಜ್ಜಿತ ವಾಹನ ಮತ್ತು ಸಾವಿರ ಟನ್ ಇಂಧನ ರವಾನಿಸಿದೆ.
ವ್ಲಾಡಿಮಿರ್ ಪುಟಿನ್’ರ ಆಕ್ರಮಣಕಾರಿ ಸೈನ್ಯದ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉಕ್ರೇನ್‌ಗೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಜರ್ಮನಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!