Monday, September 26, 2022

Latest Posts

ಉತ್ತರ ಪ್ರದೇಶದಲ್ಲಿ ಲಂಪೀ ವೈರಸ್‌ ತಾಂಡವ: ಇದುವರಗೆ 115 ಜಾನುವಾರುಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡಿರುವ ಭೀಕರ ಖಾಯಿಲೆಗಳಲ್ಲಿ ಲಂಪಿ ಚರ್ಮರೋಗ ವೈರಸ್‌ ಕೂಡಾ ಒಂದು. ಮುಖ್ಯವಾಗಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಈ ಮಾರಕ ಖಾಯಿಲೆಯು ಪಶುಗಳನ್ನು ಒದ್ದಾಡಿಸಿ ಕೊನೆಗೆ ಸಾವಿಗೆ ನೂಕುತ್ತದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಈ ಖಾಯಿಲೆ ವ್ಯಾಪಕವಾಗಿದ್ದು ಹಲವಾರು ಜಾನುವಾರುಗಳು ಈ ರೋಗಕ್ಕೆ ತುತ್ತಾಗಿವೆ.

ಮಾಹಿತಿಯೊಂದರ ಪ್ರಕಾರ ಸುಮಾರು 15,000 ಜಾನುವಾರುಗಳು ಲಂಪಿ ವೈರಸ್‌ ಸೋಂಕಿಗೆ ಒಳಗಾಗಿದ್ದು ಇದುವರೆಗೆ ಒಟ್ಟೂ 115 ಪಶುಗಳು ಸಾವನ್ನಪ್ಪಿವೆ. ಉತ್ತರ ಪ್ರದೇಶದ 1,414 ಹಳ್ಳಿಗಳು ವೈರಸ್‌ ನಿಂದ ಬಾಧಿತವಾಗಿವೆ.

ಯುಪಿ ಸರ್ಕಾರವು ಲಂಪಿ ವೈರಸ್ ತಡೆಗಟ್ಟುವಿಕೆಗಾಗಿ ತಂಡ-9 ಅನ್ನು ರಚಿಸಿದ್ದು ಇದು ರೋಗವನ್ನು ತಡೆಗಟ್ಟಲು ಆಗಸ್ಟ್ 29 ರಿಂದ ಸೆಪ್ಟೆಂಬರ್ 3 ರವರೆಗೆ 6 ದಿನಗಳ ಅಭಿಯಾನವನ್ನು ನಡೆಸುತ್ತಿದೆ.

ಪಶ್ಚಿಮ ಯುಪಿಯ 21 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಅಲಿಗಢ್, ಅಮ್ರೋಹಾ, ಬಾಗ್‌ಪತ್, ಬಿಜ್ನೋರ್, ಬದೌನ್, ಬುಲಂದ್‌ಶಹರ್, ಇಟಾಹ್, ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಹಾಪುರ್, ಹತ್ರಾಸ್, ಮಥುರಾ, ಮೀರತ್, ಮೊರಾದಾಬಾದ್, ಮುಜಾಫರ್‌ನಗರ, ಸಹರಾನ್‌ಪುರ, ಸಂಭಾಲ್, ಶಹಜಾನ್‌ಪುರ, ಶಾಮ್ಲಿ, ಫಿರೋಜಾಬಾದ್ ಮತ್ತು ಬರೇಲಿ ಪ್ರದೇಶಗಳಲ್ಲಿ ಲಂಪಿ ವೈರಸ್‌ ರೋಗ ವರದಿಯಾಗಿದೆ. ಈ ಹಿನ್ನೆಲಯಲ್ಲಿ ಬೇರೆ ರಾಜ್ಯಗಳು ಮತ್ತು ಜಾತ್ರೆಗಳಿಗೆ ಪ್ರಾಣಿಗಳ ಪ್ರವೇಶವನ್ನು ಸರ್ಕಾರ ನಿಷೇಧಿಸಿದೆ. ಮಥುರಾದ ದುವಾಸುನಲ್ಲಿರುವ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಲಂಪಿ ವೈರಸ್‌ ರೋಗದ ಮಾದರಿಗಳನ್ನು ಪರೀಕ್ಷಿಸಲು ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!