ಆರ್ಥಿಕ ಹೊಡೆತಕ್ಕೆ ಶ್ರೀಲಂಕಾ ತತ್ತರ: ಇಂಧನ ಖರೀದಿಗೆ ಸರದಿಯಲ್ಲಿ ನಿಂತಿದ್ದ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದ್ವೀಪರಾಷ್ಟ್ರ ಲಂಕಾ ಹಣಕಾಸಿನ ಬಿಕ್ಕಟ್ಟು, ಅಗತ್ಯ ವಸ್ತುಗಳ ಅಲಭ್ಯತೆಯಿಂದ ತತ್ತರಿಸಿದೆ. ಇಂಧನಕ್ಕಾಗಿ ಹಹಾಕಾರವೇರ್ಪಟ್ಟಿದ್ದು,  ಇಂಧನವನ್ನು ಖರೀದಿಗೆ ಸರದಿ ಸಾಲಿನಲ್ಲಿ ಕಾಯುತ್ತಿದ್ದಾಗ ಕುಸಿದುಬಿದ್ದು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾದ ಪೂರ್ವ ಪ್ರಾಂತ್ಯದಲ್ಲಿರುವ ಕಿನ್ನಿಯಾ ಎಂಬ ಪಟ್ಟಣದ ಪೆಟ್ರೋಲ್‌ ಬಂಕ್‌ ನಲ್ಲಿ ಎರಡು ದಿನಗಳಿಂದ ರಾತ್ರಿ ಹಗಲೆನ್ನದೆ ಇಂಧನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದ 59 ವರ್ಷದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ. ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿನ್ನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ದೇಶದ ಪಶ್ಚಿಮ ಪ್ರಾಂತ್ಯದ ಮಥುಗಮದ ಫಿಲ್ಲಿಂಗ್ ಸ್ಟೇಷನ್‌ನ ನಲ್ಲಿ  ಇಂಧನ ತುಂಬಿಸಿಕೊಳ್ಳಲು ಸರದಿಯಲ್ಲಿ ಕಾಯುತ್ತಿದ್ದಾಗ 70 ವರ್ಷದ ವ್ಯಕ್ತಿಯು ಸಹ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಶ್ರೀಲಂಕಾದ ಪೆಟ್ರೋಲ್‌ ಬಂಕ್‌ ಗಳಿಗೆ10 ದಿನಗಳ ನಂತರ ಇಂಧನಗಳು ಇಂಧನ ತಲುಪಿಸಲಾಗಿದ್ದು, ಸರಿಯಾದ ವಿತರಣಾ ವ್ಯವಸ್ಥೆ ಇಲ್ಲದ ಕಾರಣ ಇಂಧನ ಪಡೆಯಲು ನೂಕುನುಗ್ಗಲು ಉಂಟಾಗಿದೆ ಎಂದು ವರದಿ ತಿಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!