ಆಹಾ ಎಂಥಾ ಛಾನ್ಸ್!‌ ಆ ದೇಶದಲ್ಲಿ ಪ್ರತೀ ವ್ಯಕ್ತಿ ಎರಡನೇ ಮದುವೆ ಆಗಲೇಬೇಕು..ಇಲ್ಲಾಂದ್ರೆ ಜೈಲುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆಯ ಸಂಪ್ರದಾಯ, ರೀತಿ-ರಿವಾಜುಗಳು ಪ್ರತಿಯೊಂದು ಪ್ರದೇಶದದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿಯೊಂದು ದೇಶವು ತನ್ನದೇ ಆದ ವಿವಾಹ ಕಾನೂನುಗಳನ್ನು ಹೊಂದಿದೆ. ನಮ್ಮ ದೇಶದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ. ಪುರುಷನು ಎರಡನೇ ಮದುವೆಯಾಗಲು ಬಯಸಿದರೆ, ಅವನು ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ ನಂತರ ಎರಡನೇ ಹೆಂಡತಿಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಎರಡನೇ ಮದುವೆಯನ್ನು ಕಾನೂನಿಗೆ ವಿರುದ್ಧ ಚಟುವಟಿಕೆ ಎಂದು ಪರಿಗಣಿಸಲಾಗಿದೆ.

ಆದರೆ ಆಫ್ರಿಕಾದ ಎರಿಟ್ರಿಯಾದಲ್ಲಿ ಪುರುಷರು ಎರಡನೇ ಮದುವೆಯಾಗಬೇಕು, ಇಲ್ಲದಿದ್ದರೆ ಜೈಲು ಪಾಲು ಎಂಬ ಆದೇಶ ಮಾಡಲಾಗಿದೆ. ಆ ದೇಶದಲ್ಲಿ ಎರಡನೇ ಮದುವೆಯಾಗದಿರುವುದು ಕಾನೂನು ಅಪರಾಧ. ಈ ಕಾನೂನು ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಅನ್ವಯಿಸುತ್ತದೆ. ಗಂಡನ ಎರಡನೇ ಮದುವೆಗೆ ಯಾವುದೇ ಮಹಿಳೆ ವಿರೋಧ ವ್ಯಕ್ತಪಡಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಎರಿಟ್ರಿಯಾ ದೇಶದಲ್ಲಿ, ಈ ಎರಡು ಮದುವೆಯ ನಿಯಮಗಳು ತಮಾಷೆಯಾಗಿಲ್ಲ. ಅದಕ್ಕೊಂದು ಬಲವಾದ ಕಾರಣವಿದೆ. ಆ ದೇಶದಲ್ಲಿ ಗಂಡು-ಹೆಣ್ಣಿನ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. 1998 ಮತ್ತು 2000 ರ ನಡುವೆ ನಡೆದ ಇಥಿಯೋಪಿಯಾದಿಂದ ಪ್ರತ್ಯೇಕತೆಯ ಯುದ್ಧದಲ್ಲಿ ಲಕ್ಷಾಂತರ ಪುರುಷರು ಸಾವನ್ನಪ್ಪಿದರು. ಇದರಿಂದ ದೇಶದಲ್ಲಿ ಪುರುಷರ ಕೊರತೆ ಎದುರಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎರಿಟ್ರಿಯಾ ದೇಶವು ಪುರುಷರು ಮತ್ತು ಮಹಿಳೆಯರ ಅನುಪಾತವನ್ನು ಸಮಾನಗೊಳಿಸಲು ಎರಡು ವಿವಾಹಗಳ ಈ ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸಿದೆ. ಈ ಕಾನೂನಿನ ಬಗ್ಗೆ ವಿಶ್ವಾದ್ಯಂತ ಟೀಕೆಗಳ ಹೊರತಾಗಿಯೂ, ಎರಿಟ್ರಿಯಾ ಹಿಂದೆ ಸರಿಯುತ್ತಿಲ್ಲ. ತಮ್ಮ ದೇಶದಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತವನ್ನು ಸಮತೋಲನಗೊಳಿಸಲು ಬೇರೆ ಮಾರ್ಗವಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!