ಚೀನಾಕ್ಕಿಂತ ಎರಡೇ ತಿಂಗಳ ಅಂತರದಲ್ಲಿ ಭಾರತದಲ್ಲಿ ಉತ್ಪಾದನೆಯಾಗಲಿದೆ ಐಫೋನ್‌ 14

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಕ್‌ ದಿಗ್ಗಜ ಆಪಲ್‌ ತನ್ನ ಹೊಸ ಐಫೋನ್‌ ಆವೃತ್ತಿಯನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಯೋಚಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಚೀನಾದಲ್ಲಿ ಐಪೋನ್‌ 14 ಉತ್ಪನ್ನವು ಆರಂಭಿಕವಾಗಿ ಬಿಡುಗಡೆಯಾಗಿ ಎರಡುತಿಂಗಳ ನಂತರ ಭಾರತದಲ್ಲಿ ಉತ್ಪಾದನೆ ಪ್ರಾರಂಭಿಸಲು ಆಪಲ್‌ ಯೋಚಿಸಿದೆ.

ಇದು ಹಿಂದೆ ಇರುತ್ತಿದ್ದ 6 ರಿಂದ 9 ತಿಂಗಳ ಅಂತರವನ್ನು ಕಡಿಮೆಮಾಡಲಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ, ವಿಳಂಬವನ್ನು ಕಡಿಮೆ ಮಾಡಲು ಪೂರೈಕೆದಾರರೊಂದಿಗೆ ಆಫಲ್‌ ಕಂಪನಿಯು ಕೆಲಸ ಮಾಡುತ್ತಿದೆ. ಯುಎಸ್ ನೊಂದಿಗೆ ಚೀನಾ ಆಡಳಿತದ ಘರ್ಷಣೆಯಿಂದ ಹಾಗೂ ಚೀನಾದಲ್ಲಿನ ಲಾಕ್‌ ಡೌನ್‌ ಗಳಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಿರುವುದರಿಂದ ಆಪಲ್‌ ತನ್ನ ಉತ್ಪಾದನಾ ಘಟಕಗಳಿಗೆ ಚೀನಾವನ್ನು ಬಿಟ್ಟು ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದೆ.

ಕೆಲ ವಿಶ್ಲೇಷಕರ ಪ್ರಕಾರ ಆಪಲ್‌ ತನ್ನ ಮುಂದಿನ ಐಪೋನ್‌ ಆವೃತ್ತಿಯನ್ನು ಎರಡೂ ದೇಶಗಳಿಂದ ಸರಿಸುಮಾರು ಒಂದೇ ಸಮಯದಲ್ಲಿ ರವಾನಿಸಲು ಚಿಂತಿಸುತ್ತಿದೆ ಎನ್ನಲಾಗಿದೆ. ಇದು ಆಪಲ್‌ ತನ್ನ ಪೂರೈಕೆ ಸರಪಳಿಯಲ್ಲಿ ವೈವುಧ್ಯತೆಯನ್ನುತರಲು ಹಾಗೂ ಚೀನಾಕ್ಕೆ ಪರ್ಯಾಯವನ್ನು ಹುಡುಕುತ್ತಿರುವುದನ್ನು ಸೂಚಿಸುವಂತಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!