ಇನ್ನು ದೇಶದಲ್ಲಿ 12,000 ರೂ.ಗಿಂತ ಅಗ್ಗದ ಚೀನಾ ಮೊಬೈಲ್‌ಗಳಿಗೆ ನಿಷೇಧ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಗ್ಗುತ್ತಿರುವ ದೇಶೀಯ ಉದ್ಯಮವನ್ನು ಉತ್ತೇಜಿಸಲು 12,000 ರೂ.ಗಿಂತ ಅಗ್ಗವಾದ ಚೀನಾ ಮೊಬೈಲ್‌ಗಳನ್ನು ನಿಷೇಧಿಸಲು ಭಾರತ ಸಜ್ಜಾಗಿದ್ದು, ಝಿಒಮಿ ಸೇರಿದಂತೆ ಇತರೆ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.

ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯ ಸಣ್ಣ ವಿಭಾಗದಿಂದ ಚೀನಾದ ದೈತ್ಯರನ್ನು ಹೊರಹಾಕುವ ಗುರಿಯನ್ನು ಹೊಂದಲಾಗಿದೆ. ರಿಯಲ್‌ಮಿ ಮತ್ತು ಟ್ರಾನ್ಸ್‌ಷನ್‌ನಂತಹ ಹೆಚ್ಚಿನ ಪ್ರಮಾಣದ ಬ್ರಾಂಡ್‌ಗಳು ಸ್ಥಳೀಯ ತಯಾರಕರನ್ನು ಮೂಲೆಗುಂಪನ್ನಾಗಿಸುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ತನ್ನ ಬೆಳವಣಿಗೆ ಹೆಚ್ಚಿಸಿಕೊಳ್ಳಲು ಝಿಒಮಿ ಮತ್ತು ಇತರೆ ವಿದೇಶಿ ಕಂಪನಿಗಳು ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿವೆ. 12,000 ರೂ.ಗಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳು ಈ ಸಾಲಿನ ತ್ರೈಮಾಸಿಕ ಮಾರಾಟದ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡಿವೆ. ಈ ಪೈಕಿ ಚೀನಾ ಕಂಪನಿಗಳು ಶೇ.80ರಷ್ಟನ್ನು ಹೊಂದಿವೆ.

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಸಂಸ್ಥೆಗಳಾದ ಝಿಒಮಿ ಮತ್ತು ಪ್ರತಿಸ್ಪರ್ಧಿ ಒಪ್ಪೊ ಹಾಗೂ ವಿವೋಗಳ ವಿರುದ್ಧ ಈಗಾಗಲೇ ತೆರಿಗೆ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!