Tuesday, September 27, 2022

Latest Posts

ಟಾಲಿವುಡ್‌ ಪ್ರಿನ್ಸ್‌ಗೆ 47ನೇ ಹುಟ್ಟು ಹಬ್ಬದ ಸಂಭ್ರಮ: ಮಹೇಶ್‌ ಬಾಬು ಬಗ್ಗೆ ನಿಮಗೆಷ್ಟು ಗೊತ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅವರ ಕ್ಲಾಸ್ ಮತ್ತು ಮಾಸ್ ಆಕ್ಷನ್‌ನಿಂದ ಸೂಪರ್‌ಸ್ಟಾರ್ ಪಟ್ಟ ಪಡೆದು ಕೋಟ್ಯಾಂತರ ಅಭಿಮಾನಿಗಳ ಮನಸಲ್ಲಿ ಸ್ಥಾನ ಸಂಪಾದಿಸಿದ ನಟ ಮಹೇಶ್‌ ಬಾಬು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಸಾಮಾಜಿಕ ಕಳಕಳಿ ಹೊಂದಿರುವ ಮಹೇಶ್‌ ಬಾಬುಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತಂದೆಯ ವಾರಸತ್ವದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟ ಪ್ರಿನ್ಸ್‌ ಸೇವಾ ಚಟುವಟಿಕೆಗಳಲ್ಲಿ ತಂದೆಯನ್ನೇ ಹಿಂದಿಕ್ಕಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

ʻಸರ್ಕಾರು ವಾರಿ ಪಾಟʼ ಸಿನಿಮಾ ಹಿಟ್‌ ಆಗಿದ್ದು, ಇದೀಗ ಆಗಸ್ಟ್ 2ನೇ ವಾರದಲ್ಲಿ ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣವನ್ನು ಮಹೇಶ್ ಬಾಬು ಪ್ರಾರಂಭಿಸಲಿದ್ದಾರೆ. ಮಹೇಶ್ ಹುಟ್ಟುಹಬ್ಬ ಹಿನ್ನೆಲೆ ಸಿನಿಮಾ, ರಾಜಕೀಯ ಗಣ್ಯರು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಮಹೇಶ್ ಬಾಬು ಅವರು ಹಲವಾರು ಸೇವಾ ಕಾರ್ಯಗಳಿಂದ ಅದೆಷ್ಟೋ ಜನರಿಗೆ ಜೀವ, ಜೀವನ ಎರಡೂ ನೀಡಿದ್ದಾರೆ. ಅವರ ಕೆಲವು ಸೇವಾ ಕಾರ್ಯಕ್ರಮಗಳು ಇಂತಿವೆ.

  • 2016 ರಲ್ಲಿ ತಮ್ಮ ತಂದೆಯ ಹುಟ್ಟೂರು ಆಂಧ್ರ ಪ್ರದೇಶದ ಬುರ್ರಿಪಾಲೆಂ ಮತ್ತು ತೆಲಂಗಾಣ ರಾಜ್ಯದ ಸಿದ್ದಾಪುರದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಆ ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
  • ಮಹೇಶ್ ಅವರ ಮಹತ್ವದ ಸೇವಾ ಕಾರ್ಯಕ್ರಮ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ. ಇದುವರೆಗೆ ಹೃದಯ ಸಂಬಂಧಿ ಸಮಸ್ಯೆ ಇರುವ 1000ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಹಲವರಿಗೆ ಜೀವದಾನ ಮಾಡಿ, ಮಕ್ಕಳ ಪಾಳಿಗೆ ದೇವರಾಗಿದ್ದಾರೆ.
  • ಚಂಡಮಾರುತದ ಸಂದರ್ಭದಲ್ಲಿ ಸಿಎಂ ಪರಿಹಾರ ನಿಧಿಗೆ 2.5 ಕೋಟಿ ರೂ. 25 ಲಕ್ಷ ನೀಡಲಾಗಿದೆ. ಕಷ್ಟಕಾಲದಲ್ಲಿ ಜನರಿಗಾಗಿ ಹಲವು ಬಾರಿ ಸರ್ಕಾರಕ್ಕೆ ನೆರವು ನೀಡಿದ್ದಾರೆ.
  • ತಂದೆ ಕೃಷ್ಣ ಅವರ ಜನ್ಮದಿನದ ನಿಮಿತ್ತ ತಾವು ದತ್ತು ಪಡೆದ ಬುರ್ರಿಪಾಲೆಂ ಗ್ರಾಮದ ಜನತೆಗೆ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡು ತಮ್ಮ ಹೃದಯ ವೈಶಾಲ್ಯತೆ ಮೆರೆದರು.
  • ಮೇಲಾಗಿ ತಮ್ಮ ಜೊತೆ ಕೆಲಸ ಮಾಡಿದವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಕಾರವನ್ನೂ ಮಹೇಶ್ ನೀಡಿದ್ದಾರೆ.
  • ಮಹೇಶ್‌ ಬಾಬು ಟ್ರಸ್ಟ್‌ ಸ್ಥಾಪಿಸಿ ಆ ಮೂಲಕ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ.

ಈ ಮೂಲಕ ಹಲವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿ ಜೀವ ಉಳಿಸುತ್ತಿರುವ ಮಹೇಶ್ ಸಿನಿಮಾ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಆಗಿರುವ ಮಹೇಶ್‌ ನೂರು ವರ್ಷ ಸಂತೋಷವಾಗಿರಲೆಂದು ಅದೆಷ್ಟೂ ಮನಸುಗಳು ತುಂಬು ಹೃದಯದಿಂದ ಹರಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!