ಮೈಸೂರಿನಲ್ಲಿ ಹಿಜಾಬ್ ತೆಗೆಯಲು ನಿರಾಕರಿಸಿದ 14 ಮಂದಿ ಮನೆಗೆ

ಹೊಸದಿಗಂತ ವರದಿ, ಮೈಸೂರು:

ಕಳೆದ ಒಂದು ವಾರದಿಂದ ಬಂದ್ ಆಗಿದ್ದ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಅರಮನೆ ನಗರಿ ಮೈಸೂರಿನಲ್ಲಿ ಇಂದಿನಿAದ ಆರಂಭವಾಗಿವೆ. ಹಿಜಾಬ್ ಧರಿಸಿಯೇ ಮುಸ್ಲಿಂ ಸಮುದಾಯದ ಯುವತಿಯರು ಕಾಲೇಜಿಗೆ ಬಂದರು. ಬಳಿಕ ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾದರು. ಕಾಲೇಜಿನ ಮುಂದೆ ಯಾವುದೇ ಪ್ರತಿಭಟನೆ, ಘೋಷಣೆಗಳು ಕಾಣಲಿಲ್ಲ. ಆದರೆ ರಾಜೀವ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಬಂದಿದ್ದ 14 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಅವರಿಗೆ ಹೈಕೋರ್ಟ್ ನೀಡಿರುವ ಆದೇಶವನ್ನು ತಿಳಿಸಿದರೂ, ಹಿಜಾಬ್ ತೆಗೆಯಲು ಒಪ್ಪಲಿಲ್ಲ. ಹಾಗಾಗಿ ಅವರಿಗೆ ತರಗತಿಗೆ ಪ್ರವೇಶ ನೀಡಲಿಲ್ಲ. ಇದರಿಂದಾಗಿ ಆ 14 ಮಂದಿ ವಿದ್ಯಾರ್ಥಿನಿಯರು ವಾಪಾಸ್ ಮನೆಗೆ ತೆರಳಿದರು.
ಕೇಸರಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿ; ಕಾಲೇಜ್‌ಗೆ ಕೇಸರಿ ಬಣ್ಣದ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯೊಬ್ಬಳು ಸಾಕಷ್ಟು ಗಮನ ಸೆಳೆದಳು. ಎನ್‌ಆರ್ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಕೇಸರಿ ಬಣ್ಣದ ಹಿಜಾಬ್ ಧರಿಸಿ ಬಂದು ಎಲ್ಲರ ಆಶ್ಚರ್ಯಕ್ಕೆ ಕಾರಣಳಾದಳು.
ಕೋರ್ಟ್ ಆದೇಶವನ್ನು ಮೀರಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸೂಕ್ಷ÷್ಮ ಪ್ರದೇಶವಾದ ಎನ್.ಆರ್.ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಕಾಲೇಜಿನ ಸುತ್ತ, ಮುತ್ತ ಕಟ್ಟೆಚ್ಚರ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾವಲು ಕಾಯುತ್ತಿದ್ದಾರೆ.
ಕಾಲೇಜ್‌ನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ್ಞಾನೆ ಜಾರಿ; ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಾಂತರ ಇರುವ ಶಾಲಾ-ಕಾಲೇಜ್‌ಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ್ಞಾನೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಪ್ರತಿಭಟನೆ, ಧರಣಿಗಳನ್ನು ನಿಷೇಧಿಸಲಾಗಿದೆ. ಅಲ್ಲದೇ ಕಾಲೇಜಿಗೆ ಸಂಬAಧಪಡದ ವ್ಯಕ್ತಿಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!