ಕಣವಿಯವರ ನಿಧನ ಇಡೀ ಸಾರಸ್ವತ ಲೋಕಕ್ಕೆ ಅಪಾರ ನಷ್ಟ: ಪ್ರಹ್ಲಾದ್ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಭಾವಜೀವಿ, ಸಮನ್ವಯ ಕವಿ, ಸೌಜನ್ಯದ ಕವಿ ಎಂದೇ ಹೆಸರಾದ ಚೆನ್ನವೀರ ಕಣವಿಯವರ ನಿಧನ ಇಡೀ ಸಾರಸ್ವತ ಲೋಕಕ್ಕೆ ಅಪಾರ ನಷ್ಟ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಚೆಂಬೆಳಕು ಇವರ ಸಮಗ್ರ ಕಾವ್ಯ. ಕಾವ್ಯಾನು ಸಂಧಾನ, ಸಾಹಿತ್ಯಚಿಂತನ, ಸಮಾಹಿತ, ಸಮತೋಲನ ಮುಂತಾದವು ಇವರ ವಿಮರ್ಶೆಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿ?ನ ಪ್ರಶಸ್ತಿ, ರಾಜ್ಯೊತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಕಣವಿಯವರು ನನ್ನ ಕಾಲೇಜು ದಿನಗಳಿಂದಲೂ ಅವರ ಅಭಿಮಾನಿ ಎಂದು ತಿಳಿಸಿದ್ದಾರೆ.
ಕಣವಿಯವರು ಭಾವಜೀವಿಯಾಗಿರುವಂತೆ ಸ್ನೇಹಜೀವಿಗಳೂ ಆಗಿದ್ದರು. ವ್ಯಕ್ತಿಗಳ ಮೇಲೆ ಅವರು ಬರೆದ? ಕವಿತೆಗಳನ್ನು ಇನ್ನೊಬ್ಬ ಕನ್ನಡ ಕವಿ ಬರೆದಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!