ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ವರದಿ, ಮೈಸೂರು:

ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮೈಸೂರು-ಬೆಂಗಳೂರು ಮಾರ್ಗದಲ್ಲಿ ಜೋಡಿ ಮಾರ್ಗ ಮತ್ತು ವಿದ್ಯುದೀಕರಣದ ನಂತರ ಸುಧಾರಿತ ಚಲನಶೀಲತೆ ಮತ್ತು ಸಮಯ ಪಾಲನೆಯಿಂದಾಗಿ ಪ್ರಸ್ತುತ ಒಂದು ದಿನದಲ್ಲಿ 90 ಮುಳ್ಳುಗಳನ್ನು ಮೈಸೂರು ನಿಲ್ದಾಣವು ನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ಧಿಯ ಸಂಭಾವ್ಯತೆಯನ್ನು ಪರಿಗಣಿಸಿ, ಅಸ್ತಿತ್ವದಲ್ಲಿರುವ ಕಾರ್ಯನಿರ್ವಹಣೆಯ ಅಡಚಣೆಗಳನ್ನು ನಿವಾರಿಸಿ, ಭವಿಷ್ಯದ ಸಾರಿಗೆಯ ಅಗತ್ಯತೆಗಳಿಗೆ ಸರಿಹೊಂದುವoತೆ ಅವಶ್ಯಕವಾದ ರೈಲ್ವೆ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯಕವಾಗಿರುವುದರಿಂದ “ಮೈಸೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ನಾಗನಹಳ್ಳಿಯಲ್ಲಿ ನೂತನ ಕೋಚಿಂಗ್ ಟರ್ಮಿನಲ್ ನ ನಿರ್ಮಾಣ” ಯೋಜನೆಯನ್ನು 2022 ರಲ್ಲಿ 482 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಜೂರುಗೊಳಿಸಲಾಗಿದೆ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು 155.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಇದರ ಉದ್ದೇಶಗಳು 
ಸಂವಹನ ನ್ಯೂನ್ಯತೆವುಳ್ಳ ವ್ಯಕ್ತಿಗಳ ತಪಾಸಣೆ ಹಾಗೂ ಪುನಶ್ಚೇತನಕ್ಕಾಗಿ ಅಗತ್ಯವಿರುವ ವೃತ್ತಿಪರರು ಮತ್ತು ಅದರ ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು.
ವಾಕ್ ದೋಷ ಹಾಗೂ ಇತರ ಸಂವಹನ ನ್ಯೂನತೆಯುಳ್ಳ ಭಾರತೀಯರಿಗೆ ಅನುಗುಣವಾಗಿ ಡೇಟಾಬೇಸ್ ಪರೀಕ್ಷೆಗಳು ಮತ್ತು ಮಾದರಿಗಳನ್ನು ರಚಿಸುವ ಸಲುವಾಗಿ ಸಂಶೋಧನೆಗಳನ್ನು ಕೈಗೊಳ್ಳುವುದು.
ಸಂವಹನ ನ್ಯೂನ್ಯತೆವುಳ್ಳ ವ್ಯಕ್ತಿಗಳಿಗೆ ಚಿಕಿತ್ಸಾ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಸಾಮರ್ಥ್ಯ ಅಭಿವೃದ್ಧಿ ಹಾಗೂ ಸಂವಹನ ನ್ಯೂನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

ಸೌಲಭ್ಯಗಳು
5 ಸಂಶೋಧನಾ ಕೇಂದ್ರಗಳು, 5 ಚಿಕಿತ್ಸಾ ಕೇಂದ್ರಗಳು, ಎರಡು ಬಾಹ್ಯ ಸೇವಾ ಕೇಂದ್ರಗಳು, ಮಾತು ಹಾಗೂ ಭಾಷಾ ವಿಜ್ಞಾನ ಕೇಂದ್ರ, ಸಂವರ್ಧನ ಹಾಗೂ ಪರ್ಯಾಯ ಸಂವಹನ ಮತ್ತು ಸಂಜ್ಞಾ ಭಾಷಾ ಕೇಂದ್ರ, ಶ್ರವಣ ವಿಜ್ಞಾನ ಕೇಂದ್ರ, ನ್ಯೂನತೆಗಳ ತಡೆಗಟ್ಟುವಿಕೆ ಹಾಗೂ ಸಾಂಕ್ರಾಮಿಕತೆಯ ಸಂಶೋಧನೆ ಮತ್ತು ಸಂವಹನ ನ್ಯೂನತೆಗಳ ಅರಿವಿನ ವರ್ತನೆಯ ವಿಜ್ಞಾನ ಕೇಂದ್ರ, ಪುನರ್ವಸತಿ ಇಂಜಿನಿಯರಿOಗ್, ಅಕೌಸ್ಟಿಕ್ಸ್ ಮತ್ತು ಬಯೋಮೆಡಿಕಲ್ ಎಂಜಿನಿಯರಿOಗ್ ಕೇಂದ್ರ, ಮಾತು ಹಾಗೂ ಭಾಷಾ ನ್ಯೂನ್ಯತೆವುಳ್ಳ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗಾಗಿ ಕೇಂದ್ರ, ಕಿವಿಮೊರೆತ ಹಾಗೂ ತಲೆಸುತ್ತುವಿಕೆ ನ್ಯೂನ್ಯತೆವುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ, ನುಂಗುವ ಕ್ರಿಯೆಯಲ್ಲಿ ನ್ಯೂನ್ಯತೆವುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ, ಸಂವಹನ ನ್ಯೂನತೆಗಳ ಶಸ್ತ್ರ ಚಿಕಿತ್ಸೆ ಹಾಗೂ ಪುನರ್ವಸತಿ ಕೇಂದ್ರ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!