ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ: ಬಸನಗೌಡ ಯತ್ನಾಳ್

ಹೊಸದಿಗಂತ ವರದಿ,ರಾಯಚೂರು :

ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು ಅಲ್ಲಿ ನಾನು ಬಿಜೆಪಿಯಿಂದ ಗೆಲುವನ್ನು ಸಾಧಿಸಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.

ರಾಯಚೂರು ಯರಮರಸ್‌ನ ಹೆಲಿಪ್ಯಾಡ್‌ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಪ್ರಚಾರ ಕೈಗೊಂಡ ಕ್ಷೇತ್ರಗಳ ಬಹುತೇಕ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ. ಹೀಗಾಗಿ ಶುಕ್ರವಾರ ವಿಜಾಪುರ ಕ್ಷೇತ್ರಕ್ಕೆ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿರುವುದರಿಂದ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಖಚಿತಪಡಿಸಿದ್ದಾರೆ. ಇದು ಬಿಜೆಪಿಗೆ ಶುಭ ಸುದ್ದಿ ಎಂದರು.

ದೇಶದಲ್ಲಿ ಲವ್‌ಜಿಹಾದ್ ದೊಡ್ಡಮಟ್ಟದಲ್ಲಿ ಬೆಳೆದುನಿಂತಿದೆ. ಇದರ ಬೇರು ವ್ಯಾಪಕವಾಗಿ ಹರಡಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಇದೊಂದು ಅಂತಾರಾಷ್ಟ್ರೀಯ ಜಾಲವಾಗಿದೆ. ಇದನ್ನು ಕಿತ್ತು ಹಾಕಲು ನಾವು ಹುಬ್ಬಳ್ಳಿ ನೆಹಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿಕೊಂಡಿದ್ದವು ನೆಹಾ ಸಾವಿನಲ್ಲಿ ರಾಜಕಾರಣವನ್ನು ಮಾಡುತ್ತಿಲ್ಲೆಂದು ಹೇಳಿದರು.

ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನಮ್ಮ ಕುಟುಂಬವನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ನೆಹಾ ಹಿರೇಮಠ ಅವರ ತಂದೆನೇ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು,ಗೃಹ ಸಚಿವರು ಎಷ್ಟು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವುದನ್ನು ರಾಜ್ಯದ ಜನತೆ ಗಮನಿಸಿದೆ. ನಾವೆಲ್ಲ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಅಂದರೆ ಈ ಪ್ರಕರಣ ಜರುಗಿ ಒಂದು ವಾರದ ನಂತರ ಮುಖ್ಯಮಂತ್ರಿಗಳು ಕುಟುಂಬ ವರ್ಗವನ್ನು ಭೇಟಿ ಆಗಲು ಬಂದಿರುವರು ಎಂದರು.
ರಾಜ್ಯದಲ್ಲಿ ಹಿಂದೂಗಳಿಗೆ ತೊಂದರೆ ಆದರೆ ಕಾಂಗ್ರೆಸ್ಸಿಗರಿಗೆ ಏನೇನು ಅನ್ನಿಸುವುದಿಲ್ಲ. ಅದೇ ಮುಸ್ಲಿಂ ಸಮುದಾಯದವರಿಗೆ ಆಗಿದ್ದರೆ ತಕ್ಷಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಮುಖ್ಯಮಂತ್ರಿಗ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಗೃಹ ಸಚಿವರಂತು ನಾಪತ್ತೆ ಆಗಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿನ ಹತ್ತು ವರ್ಷದ ಆಡಳಿತ ಟ್ರಯಲ್ ಮಾತ್ರ ಬರುವ ದಿನಗಳಲ್ಲಿ ಲವ್ ಜಿಹಾದ್ ಕಾನೂನನ್ನು ಜರಿಗೆ ತರುತ್ತೇವೆ. ಸಮಾನ ನಾಗರೀಕ ಸಂಹಿತೆಯನ್ನು ಜಾರಿಗೆ ತರುತ್ತೇವೆ. ಪಿಎಫ್‌ಐ ಸೇರಿದಂತೆ ಕೆಲ ಮುಸ್ಲಿಂ ಸಂಘಟನೆಗಳು ೨೦೪೭ಕ್ಕೆ ಬಾರತವನ್ನು ಇಸ್ಲಾಂ ರಾಷ್ಟçವಾಗಿಸುವದಾಗಿ ಹೇಳಿವೆ. ಹೀಗಾಗಿನೇ ಇಂತಹ ಸಂಘಟನೆಗಳನ್ನು ಬಿಜೆಪಿ ಬ್ಯಾನ್ ಮಾಡಿತ್ತು. ಬರುವ ದಿನಗಳಲ್ಲಿ ಮುಸ್ಲೀಂಮರಿಗೆ ಇರುವ ಮೀಸಲಾತಿಯನ್ನು ತಗೆದು ಪಜಾ, ಪಪಂ, ಹಿಂದುಳಿದವರಿಗೆ ಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ನರೇಂದ್ರ ಮೋದಿಯವರ ೧೦ ವರ್ಷಗಳ ಆಡಳಿತವನ್ನು ನೋಡಿ ಶುಕ್ರವಾರ ಜರಗುವ ಮತದಾನದಲ್ಲಿ ಮತದಾರರು ಮತದಾನ ಮಾಡಬೇಕೆಂದರು. ದೇಶದ ರಕ್ಷಣೆಗಾಗಿ ಬೆಳಗಿನಿಂದಲೇ ಮತದಾನ ಮಾಡಲಿಕ್ಕೆ ಆಗಮಿಸಬೇಕು. ಹಿಂದೂಗಳ ಆಸ್ತಿಯನ್ನು ತಗೆದುಕೊಂಡು ಮುಸ್ಲೀಮರಿಗೆ ಹಂಚುವ ಸಂಚು ಕಾಂಗ್ರೆಸ್ಸಿಗರಾಗಿದೆ. ಈ ಹಿಂದೆನೂ ಮಾಜಿ ಪ್ರಧಾನಿ ಮನಮೋಹನಸಿಂಗ್ ಹೇಳಿದ್ದನ್ನು ಇಲ್ಲಿ ಗಮನಿಸಬಹುದು. ಭಾರತೀಯ ಮತದಾರರು ಪ್ರಜ್ಞಾವಂತರಿದ್ದಾರೆ. ಈ ಬಾರಿ ಕಾಂಗ್ರೆಸ್ ೪೦ಕ್ಕೂ ಕಡಿಮೆ ಸ್ಥಾನವನ್ನು ಗೆಲ್ಲುತ್ತದೆ. ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡುವುದಕ್ಕೂ ಕಾಂಗ್ರೆಸ್ಸಿಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!