ಕಾಲಿನಿಂದಲೇ ಗುಂಡು ಹಾರಿಸಿ ಮನುಷ್ಯನನ್ನೇ ಕೊಂದ ನಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನುಷ್ಯ ನಾಯಿಯ ಮೇಲೆ ಗುಂಡು ಹಾರಿಸಿ ಕೊಂದ ಪ್ರಕರಣಗಳು ಸಾಕಷ್ಟಿವೆ, ಆದರೆ ಯುಎಸ್‌ನಲ್ಲಿ ನಾಯಿಯೇ ಮನುಷ್ಯನನ್ನು ಗುಂಡು ಹಾರಿಸಿ ಕೊಂದಿದೆ.

ಆದರೆ ಇದು ಬೇಕಂತ ಆಗಿದ್ದಲ್ಲ, ಆಕಸ್ಮಿಕವಾಗಿ ನಾಯಿ ಗುಂಡು ಹಾರಿಸಿದೆ. ಪ್ರಾಣಿ ಬೇಟೆಗೆಂದು ವ್ಯಕ್ತಿಯೊಬ್ಬ ನಾಯಿಯನ್ನು ಕರೆದುಕೊಂಡು ಹೊರಟಿದ್ದ. ಈ ವೇಳೆ ತನ್ನ ಗಾಡಿಯಲ್ಲಿ ನಾಯಿಯನ್ನು ಕೂರಿಸಿದ್ದ.

ಬೇಟೆಗೆ ಬಳಸುವ ಗನ್ ಕೂಡ ಅಲ್ಲೇ ಇತ್ತು, ಅದರ ಪಕ್ಕದಲ್ಲೇ ನಾಯಿ ಕುಳಿತಿದ್ದು, ಹಿಂದೆ ಸೀಟ್‌ನಲ್ಲಿದ್ದ ನಾಯಿ ಮಿಸ್ ಆಗಿ ಟ್ರಿಗರ್ ಮೇಲೆ ಕಾಲು ಇಟ್ಟಿದೆ. ವಾಹನದ ಮುಂಭಾಗದಲ್ಲಿ ವ್ಯಕ್ತಿ ಕೂತಿದ್ದು, ಗುಂಡು ವ್ಯಕ್ತಿಗೆ ತಗುಲಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!