SHOCKING NEWS | ರೈಲ್ವೆ ಹಳಿ ಮೇಲೆ ಶಾರ್ಟ್ ಫಿಲಂ ಶೂಟಿಂಗ್, ರೈಲಿಗೆ ಸಿಲುಕಿ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾರ್ಟ್ ಫಿಲಂ ಶೂಟಿಂಗ್ ಮಾಡುವ ವೇಳೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಕಾಂತಿ ನಗರ ಮೇಲ್ಸೇತುವೆ ಬಳಿ ರೈಲ್ವೆ ಹಳಿಗಳ ಮೇಲೆ ನಿಂತು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಗಳಾದ ವಂಶ್ ಶರ್ಮಾ ಹಾಗೂ ಮೋನು ಎಂದು ಗುರುತಿಸಲಾಗಿದೆ. ಆಗಾಗ ಲೈವ್ ರೈಲು ಚಲಿಸುವುದನ್ನು ಚಿತ್ರೀಕರಣ ಮಾಡೋದಕ್ಕಾಗಿ ಟ್ರ್ಯಾಕ್‌ಗಳ ಮೇಲೆ ಬಂದು ಹೋಗುತ್ತಿದ್ದರು, ಹಳಿಗಳ ಮೇಲೆ ಮೃತರ ಮೊಬೈಲ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!