ಪಿಒಕೆಯಲ್ಲಿ ಅಮೆರಿಕಾ ಕಾಂಗ್ರೆಸ್‌ ಪ್ರತಿನಿಧಿ ಪರ್ಯಟನೆ: ಭಾರತ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕ ಕಾಂಗ್ರೆಸ್‌ ಸದಸ್ಯರೊಬ್ಬರು ಭೇಟಿ ನೀಡಿದ್ದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಈ ನಡೆಯನ್ನು ಸಂಕುಚಿತ ರಾಜಕೀಯ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಬಣ್ಣಿಸಿದೆ. ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಲ್ಹಾರ್ ಒಮರ್ ಅಧಿಕೃತವಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಪಾಕ್‌ ಭೇಟಿ ನೀಡಿದ ಇಲ್ಹಾರ್, ನಂತರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದು ಸರಿಯಲ್ಲ ಎಂದು ಅವರ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ.

”ಭಾರತದ ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಅಕ್ರಮವಾಗಿ ಪಾಕ್ ವಶಪಡಿಸಿಕೊಂಡಿದೆ. ಅಂತಹ ಸ್ಥಳಕ್ಕೆ ಇಲ್ಹಾನ್ ಒಮರ್ ಭೇಟಿ ನೀಡಿದ್ದಾರೆ. ಸಂಕುಚಿತ ಮನಸ್ಸಿನ ರಾಜಕಾರಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ, ಇದು ನಮ್ಮ ಭೌಗೋಳಿಕ ಸಮಗ್ರತೆಗೆ ಭಂಗ ತರುವ ಸಾಧ್ಯತೆಯಿದೆ”. ಅದಕ್ಕಾಗಿಯೇ ನಾವು ಈ ಕೃತ್ಯವನ್ನು ಖಂಡಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ. ನಾವು ಈ ದಾಳಿಗಳನ್ನು ಖಂಡಿಸುತ್ತೇವೆ ಮತ್ತು ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!