2ನೇ ಇನ್ನಿಂಗ್ಸ್: ಭಾರತ 303 ರನ್​ಗಳಿಸಿ ಡಿಕ್ಲೇರ್​, ಶ್ರೀಲಂಕಾ ಗೆಲುವಿಗೆ 447 ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ತಂಡ 2ನೇ ಇನ್ನಿಂಗ್ಸ್​ನಲ್ಲಿ ರಿಷಭ್​ ಪಂತ್ ಮತ್ತು ಶ್ರೇಯಸ್​ ಅಯ್ಯರ್​ ಅವರ ತ್ವರಿತ ಅರ್ಧಶತಕಗಳ ನೆರವಿನಿಂ 9 ವಿಕೆಟ್​ ಕಳೆದುಕೊಂಡು 303 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿದ್ದು, ಶ್ರೀಲಂಕಾ ತಂಡಕ್ಕೆ 447 ರನ್​ಗಳ ಅಸಾಧಾರಣ ಗುರಿ ನೀಡಿದೆ.
ಮೊದಲ ದಿನ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 252ಕ್ಕೆ ಆಲೌಟ್ ಆದರೆ, ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ಕೇವಲ 109ರನ್​ಗಳಿಗೆ ಸರ್ವಪತನಗೊಂಡಿತ್ತು. 143 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 303 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.
ಆರಂಭಿಕ ಮಯಾಂಕ್ ಅಗರ್ವಾಲ್(22) ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ(46) 46 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 35 ರನ್​ಗಳಿಸಿದ್ದ ವಿಹಾರಿ ಮತ್ತು 13 ರನ್​ಗಳಿಸಿದ್ದ ಕೊಹ್ಲಿ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಬೌಲಿಂಗ್​ನಲ್ಲಿ ಔಟಾದರು.
ರಿಷಭ್​ ಪಂತ್ 31 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ ಸಹಿತ 50 ರನ್, ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 67ರನ್​ ರನ್​ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!