ಅಮೆರಿಕ,ಇಂಗ್ಲೆಂಡ್‌, ಜರ್ಮನಿಗಿಂತಲೂ ಹೆಚ್ಚು ಡಿಜಿಟಲ್‌ ವಹಿವಾಟು ನಡೆಸಿದೆ ಭಾರತ- ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡಿಜಿಟಲ್‌ ಇಂಡಿಯಾ ಯೋಜನೆ ಮೂಲಕ ದೇಶದಲ್ಲಿ ಡಿಜಿಟಲ್‌ ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತಿದ್ದು ಯುಪಿಐನಂತಹ ಪಾವತಿ ವ್ಯವಸ್ಥೆಗಳ ಮೂಲಕ ಡಿಜಿಟಲ್‌ ಹಣಕಾಸು ವ್ಯವಸ್ಥೆಯನ್ನು ಸುಗಮಗೊಳಿಸಲಾಗಿತ್ತಿದೆ. ಇದರ ಪರಿಣಾಮ ದೇಶದಲ್ಲಿ ಡಿಜಿಟಲ್‌ ಪಾವತಿಗಳೂ ಹೆಚ್ಚಿವೆ. ಈ ಕುರಿತು ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿದ್ದು ಕಳೆದ ವರ್ಷ ಭಾರತದಲ್ಲಿ ಅತಿ ಹೆಚ್ಚು ಡಿಜಿಟಲ್‌ ವಹಿವಾಟುಗಳು ನಡೆದಿದ್ದು, ಅಮೆರಿಕ, ಇಂಗ್ಲೆಂಡ್‌, ಜರ್ಮನಿ ಮತ್ತು ಪ್ರಾನ್ಸ್‌ ದೇಶಗಳ ಒಟ್ಟಾರೆ ಡಿಜಿಟಲ್‌ ಪಾವತಿಗಳನ್ನು ಮೀರಿದೆ ಎಂದು ಹೇಳಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿರುವ ಪ್ರಕಾರ ಅಶ್ವಿನಿ ವೈಷ್ಣವ್‌ “ಡಿಸೆಂಬರ್ 2022 ರಲ್ಲಿ ವಾರ್ಷಿಕವಾಗಿ 1.5 ಟ್ರಿಲಿಯನ್ ಡಾಲರ್ ಡಿಜಿಟಲ್‌ ವಹಿವಾಟುಗಳಾಗಿವೆ. ಯುಎಸ್, ಯುಕೆ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿನ ಒಟ್ಟು ಡಿಜಿಟಲ್ ವಹಿವಾಟುಗಳನ್ನು ಹೋಲಿಸಿ ಅವುಗಳನ್ನು ಸಂಯೋಜಿಸಿದರೆ, ಭಾರತದ ಅಂಕಿಅಂಶಗಳು ಅದಕ್ಕಿಂತ ಹೆಚ್ಚಿವೆ” ಎಂದು ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಡಿಜಿಟಲ್ ರೂಪದಲ್ಲಿ ಪಾವತಿಗಳು ಹೆಚ್ಚುತ್ತಿವೆ. ಡಿಜಿಟಲ್ ಪಾವತಿಗಳ ಅತ್ಯಂತ ಜನಪ್ರಿಯ ರೂಪಗಳೆಂದರೆ ಭಾರತ್ ಇಂಟರ್‌ಫೇಸ್ ಫಾರ್ ಮನಿ-ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (BHIM-UPI) ಮತ್ತು ತಕ್ಷಣದ ಪಾವತಿಗಳ ಸೇವೆ (IMPC). ಡಿಜಿಟಲ್‌ ಬಳಕೆದಾರರಿಗೆ UPI ಪಾವತಿಯು ಆದ್ಯತೆಯ ವಿಧಾನವಾಗಿ ಹೊರಹೊಮ್ಮಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುಪಿಐ ಪಾವತಿಗಳು ದಾಖಲೆಯ ಗರಿಷ್ಠ 12.82 ಲಕ್ಷ ಕೋಟಿ ರುಪಾಯಿ ಮಟ್ಟವನ್ನು ತಲುಪಿತ್ತು. ಇದೇ ತಿಂಗಳಲ್ಲಿ ಒಟ್ಟು 782 ಕೋಟಿ ವಹಿವಾಟು ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!