Saturday, June 25, 2022

Latest Posts

ಈ ಮುಸ್ಲಿಂ ಹುಡುಗನ ಪರ ಭಾರತ ನಿಲ್ಲಬೇಕಿದೆ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪ್ರವಾದಿ ಹೇಳಿಕೆಯ ಬಗ್ಗೆ ಮುಸ್ಲಿಮರಿಂದ ವ್ಯಾಪಕ ವಿರೋಧ ಎದುರಿಸುತ್ತಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದಕ್ಕಾಗಿ ಹಾಗೂ ಪ್ರವಾದಿಯ ವಿವಾಹದ ಕುರಿತು ಪ್ರಶ್ನಿಸಿದ್ದಕ್ಕಾಗಿ ಸಾದ್ ಅಶ್ಫಾಕ್ ಅನ್ಸಾರಿ ಎಂಬ ಮುಸ್ಲಿಂ ಯುವಕನ ಮೇಲೆ ಮುಸ್ಲಿಂ ಜನಸಮೂಹವು ಹಲ್ಲೆ ನಡೆಸಿದೆ. ಇದೇ ಒತ್ತಡಕ್ಕೆ ಒಳಗಾಗಿ ಪೋಲೀಸರು  ಆತನನ್ನು ಬಂಧಿಸಿದ್ದಾರೆ.

ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ಅಶ್ಫಾಕ್‌ ಅನ್ಸಾರಿ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ  “50 ವರ್ಷದ ವ್ಯಕ್ತಿಯಾದವನು 6-9 ವರ್ಷದ ಮಗುವನ್ನು ಮದುವೆಯಾಗುವುದು ಸ್ಪಷ್ಟ ಮಕ್ಕಳ ಶೋಷಣೆಯಾಗುವುದಿಲ್ಲವೇ? ಇದನ್ನು ನೀವು ಹೇಗೆ ಬೆಂಬಲಿಸುತ್ತೀರಿ ಎಂದು ತಿಳಿಯುತ್ತಿಲ್ಲ. ನಿಮಗೇನಾದರೂ 6 ವರ್ಷದ ಮಗಳಿದ್ದರೆ ನೀವು ಅವಳನ್ನು 50 ವರ್ಷದವನಿಗೆ ಕೊಡ್ತೀರಾ?(ಅದರ ಬಗ್ಗೆ ಯೋಚಿಸಿ) ” ಎಂದು ಬರೆದುಕೊಂಡಿದ್ದ. ಅಲ್ಲದೇ ಈ ವಿಷಯದ ಬಗ್ಗೆ ಮಾತನಾಡಿದ್ದ ನೂಪುರ್‌ ಶರ್ಮಾ ಅವರನ್ನು ʼಧೈರ್ಯಶಾಲಿ ಮಹಿಳೆʼ ಎಂದು ಕರೆದಿದ್ದ.

ಅಲ್ಲದೇ ಇನ್ನೊಂದು ಪೋಸ್ಟೊಂದರಲ್ಲಿ “ನಾನು ಯಾವುದೇ ಧರ್ಮವನ್ನು ಬೆಂಬಲಿಸುವುದಿಲ್ಲ, ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ. ಹಲವಾರು ವರ್ಷಗಳ ಹಿಂದೆ ಸತ್ತ ವ್ಯಕ್ತಿಯೊಬ್ಬನ ಬಗ್ಗೆ ಮಾತನಾಡಿದರೆ ಅಂಥವರ ಕುಟುಂಬದವರನ್ನೂ ಕೊಲ್ಲಲು ಹಿಂದೆಮುಂದೆ ನೋಡದ ಇವರ ಜಗತ್ತಿನಲ್ಲಿ ಬದುಕಲು ನನಗೆ ಭಯವಾಗುತ್ತದೆ. ಎಚ್ಚೆತ್ತು ಕೊಳ್ಳಿ, ಭಯೋತ್ಪಾದನೆಯನ್ನು ಹರಡುವ ಧರ್ಮಗಳನ್ನು ತೊಲಗಿಸಿ ಮಾನವೀಯತೆಯಿಂದ ಬದುಕಿ” ಎಂದು ಬರೆದುಕೊಂಡಿದ್ದ.

ಇದರೊಂದಿಗೆ “ನಾನು ಈ ಪೋಸ್ಟ್‌ ಮಾಡಿದ್ದರಿಂದ ಹಲವರ ದ್ವೇಷಕ್ಕೆ ಗುರಿಯಾಗಬೇಕಾಗುತ್ತದೆ. ಇದನ್ನು ನೀವು (ಇತರ ಮುಸ್ಲಿಮರು) ತಪ್ಪಾಗಿ ಅರ್ಥೈಸಿಕೊಳ್ಳುತ್ತೀರೆಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ” ಎಂದೂ ಹಂಚಿಕೊಂಡಿದ್ದ.

ಇದರಿಂದ ಕುಪಿತಗೊಂಡ ಕೆಲ ಮುಸ್ಲಿಮರು ಅಶ್ಪಾಕ್‌ ಅನ್ಸಾರಿಯ ಮನೆಗೆ ಬಂದು (ಶನಿವಾರ) ಆತನಿಗೆ ಮನೆಯಿಂದ ಹೊರಬರುವಂತೆ ಒತ್ತಾಯಿಸಿತು. ಎದೆಗುಂದದೆ ಹೊರ ಬಂದ ಅನ್ಸಾರಿ ಅವರೊಂದಿಗೆ ಚರ್ಚೆಗಿಳಿದ. ಆದರೆ ಉದ್ರಿಕ್ತ ಗೊಂಡ ಗುಂಪು ಆತನ ಮೇಲೆ ಹಲ್ಲೆ ಮಾಡುವ ಬೆದರಿಕೆಯೊಡ್ಡಿತು. ಆತ ಕೈ ಮುಗಿದು ಬೇಡಿಕೊಂಡರೂ ಬಲವಂತವಾಗಿ ಆತನಿಗೆ ʼಕಲ್ಮಾʼ ವನ್ನು ಓದಿಸಲಾಯಿತು. ಕೆಲವರು ಆತನಿಗೆ ಥಳಿಸಿ ಹಲ್ಲೆ ಮಾಡಿದರು. ಇಷ್ಟಕ್ಕೇ ಸುಮ್ಮನಾಗದ ಉದ್ರಿಕ್ತ ಮುಸ್ಲಿಮರು ಮರುದಿನ (ಭಾನುವಾರ) ಮತ್ತೆ ಆತನ ಮನೆಯೆದುರು ಪ್ರತಿಭಟಿಸಿದವು ಆತ “ಆಕ್ಷೇಪಾರ್ಹ ಪೋಸ್ಟ್‌ಗಳ ಮೂಲಕ ಧರ್ಮನಿಂದನೆ” ಮಾಡಿದ್ದಾನೆಂದು ದೂರು ಕೊಡಲಾಯಿತು. ಆತನ್ನು ಬಂಧಿಸಬೇಕೆಂದು ಒತ್ತಾಯಿಸಲಾಯಿತು.

ಆತನನ್ನು ಮನೆಯಿಂದ ಹೊರಗೆಳೆದು ಥಳಿಸಲಾಯಿತು. “ಇಂತಹ ಘಟನೆ ಮತ್ತೆ ನಡೆದರೆ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ, ನಾವು ನಮ್ಮ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅನ್ಸಾರಿಗೆ ಬೆದರಿಕೆ ಹಾಕಲಾಯಿತು. ಇಷ್ಟೆಲ್ಲ ಘಟನೆಗಳು ನಡೆದ ನಂತರ ಭಿವಂಡಿ ಪೋಲೀಸರು ಅನ್ಸಾರಿಯನ್ನ ಬಂಧಿಸಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾಗಾದರೆ ಅಶ್ಫಾಕ್‌ ಅನ್ಸಾರಿಗೆ ವಾಕ್‌ ಸ್ವಾತಂತ್ರ್ಯ ಇಲ್ಲವೇ? ತನ್ನ ಭಾವನೆಯನ್ನು ಆತ ಮುಕ್ತವಾಗಿ ಮಾತನಾಡುವ ಹಾಗೂ ಇಲ್ಲವೇ ಎಂಬೆಲ್ಲ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟು ಹಾಕಿದೆ. ಒಂದರ್ಥದಲ್ಲಿ ಹೇಳುವುದಾದರೆ ಮುಸ್ಲಿಂ ಸಮಾಜದಲ್ಲಿ ಸುಧಾರಿತ ಧ್ವನಿಗಳು ಯಾಕೆ ಹುಟ್ಟಿಕೊಳ್ಳುತ್ತಿಲ್ಲ ಎಂಬುದಕ್ಕೆ ಈ ಘಟನೆಯಲ್ಲಿ ಉತ್ತರ ಅಡಕವಾದಂತಿದೆ. ಅಂಥವರನ್ನು ಹೇಗೆ ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾದಂತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss