Thursday, October 6, 2022

Latest Posts

ಭಾರತ- ನ್ಯೂಜಿಲೆಂಡ್‌ ಪಂದ್ಯಕ್ಕೆ ಮಳೆ ಅಡ್ಡಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನ‌ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ʼಎʼ ನಡುವಣ ಮೂರನೇ ದಿನ ಪಂದ್ಯ ಮಳೆಯಿಂದ ತಾತ್ಕಾಲಿಕವಾಗಿ ಸ್ಥಗೀತ ಗೊಂಡಿದೆ.
ಶುಕ್ತವಾರ ತಡ ರಾತ್ರಿ ಮಳೆಯಾಗಿತ್ತು.‌ ಇದರಿಂದ ಮೈದಾನ ತೇವಗೊಂಡಿದ್ದರಿಂದ ಪಂದ್ಯ ಆರಂಭವಾಗಿಲ್ಲ. ಮಧ್ಯಾಹ್ನವಾದರೂ ಸಹ ಮೋಡ ಕವಿದ ವಾತಾವರಣವಿದೆ. ಮಳೆ ಜಿಟಿಜಿಟಿಯಾಗಿ ಬರುತ್ತಿದೆ.
ಕ್ರೀಡಾಂಗಣದಲ್ಲಿ ಸಿಬ್ಬಂದಿ ತೇವಾಂಶ ಆರಿಸಲು ಸತತ ಪರಿಶ್ರಮ ಪಡುತ್ತಿದ್ದಾರೆ. ಅಂಪೈರ್ ಹಾಗೂ ಮ್ಯಾಚ್ ರೇಫರಿ ಮೈದಾನ ಪರಿಶೀಲನೆ ನಡೆಸುತ್ತಿದ್ದು, ಮಧ್ಯಾಹ್ನದ ನಂತರ ಪಂದ್ಯ ಆರಂಭಿಸುವ ಸಾಧ್ಯತೆಗಳಿವೆ.
ಮಳೆ ನಿಂತರೆ ಕಣಕ್ಕಿಳಿಯಲು ಆಟಗಾರರು ಕಾದಿದ್ದಾರೆ. ಅಭಿಮಾನಿಗಳು ಪಂದ್ಯದ ಪುನರಾಗಮನಕ್ಕೆ ಕಾತರದಿಂದ ಕಾಯುತ್ತಿರುವ ದೃಶ್ಯಗಳು ಕಂಡುಬಂದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!