ಹಿಂದೂ ನಿಂದನೆಯ ಪಾದ್ರಿ ಜೊತೆ ರಾಹುಲ್‌ ʻಭಾರತ್‌ ಜೋಡೋʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

150 ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ವಿವಾದಿತ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾದರು. ಈ ವೇಳೆ ಪಾದ್ರಿ ಪೊನ್ನಯ್ಯ ಜೀಸಸ್‌ ಕ್ರೈಸ್ಟ್‌ ಮಾತ್ರ ನಿಜವಾದ ದೇವರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮಿಳುನಾಡು ಪಾದ್ರಿಯೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದದ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಇದರಲ್ಲಿ ರಾಹುಲ್ ಗಾಂಧಿ ʻಯೇಸು ಕ್ರಿಸ್ತ ದೇವರ ರೂಪವೇ? ಅದು ನಿಜವೇ?ʼ ಎಂದು ಕೇಳಿದ್ದಾರೆ. ಅದಕ್ಕೆ ತಮಿಳುನಾಡಿನ ಪಾದ್ರಿ ಜಾರ್ಜ್ ಪೊನ್ನಯ್ಯ, “ಅವನೇ ನಿಜವಾದ ದೇವರು” ಎಂದು ಉತ್ತರಿಸಿದ್ದಾರೆ.

ಪೊನ್ನಯ್ಯ ಪ್ರಕಾರ “ದೇವರು(ಜೀಸಸ್) ಅವನನ್ನು (ಸ್ವತಃ) ಮನುಷ್ಯನಂತೆ, ನಿಜವಾದ ವ್ಯಕ್ತಿಯಾಗಿ‌ ಜನರಿಗೆ ಕಾಣುತ್ತಾನೆ. ಹಿಂದೂ ದೇವತೆಗಳ ಶಕ್ತಿ ರೂಪದಲ್ಲಿ ಅಲ್ಲ. ಹಿಂದೂ ದೇವರುಗಳಿಗಿಂತ ಜೀಸಸ್ ಒಬ್ಬನೇ ದೇವರು ಎಂದು ಹೇಳಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಈ ಹಿಂದೆ ಕೂಡಾ ಪೊನ್ನಯ್ಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದರು. ಕಳೆದ ವರ್ಷ ಜುಲೈನಲ್ಲಿ ಮಧುರೈನ ಕಲ್ಲಿಕುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಡಿಎಂಕೆ ಸಚಿವರು ಮತ್ತು ಇತರರ ವಿರುದ್ಧ ‘ದ್ವೇಷ ಭಾಷಣ’ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

“ಭಾರತ ಮಾತೆಯ ಕಲ್ಮಶಗಳು ನಮ್ಮನ್ನು ಕಲುಷಿತಗೊಳಿಸಬಾರದು ಎಂಬ ಕಾರಣದಿಂದ ನಾನು ಬೂಟುಗಳನ್ನು ಧರಿಸುತ್ತೇನೆ” ಎಂದು ಭಾರತಮಾತೆಯನ್ನು ಅವಮಾನಿಸಿ ಸೆರೆವಾಸ ಅನುಭವಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!