May 15, 2026
Friday, May 15, 2026
spot_img

‘ಪಾಕ್ ಅಲ್ಲ, ಭಾರತವೇ ನಂಬಿಕಸ್ಥ’: ಟ್ರಂಪ್‌ಗೆ ರಷ್ಯಾ ಕಿವಿ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೇ ಅಮೆರಿಕಕ್ಕೆ ರಷ್ಯಾ ಮಹತ್ವದ ಸಂದೇಶ ರವಾನಿಸಿದೆ.

ಇರಾನ್-ಅಮೆರಿಕ ಸಂಘರ್ಷಕ್ಕೆ ಶಾಶ್ವತ ಪರಿಹಾರ ಬೇಕಿದ್ದರೆ ಪಾಕಿಸ್ತಾನವಲ್ಲ, ಭಾರತದ ರಾಜತಾಂತ್ರಿಕ ಅನುಭವವನ್ನು ಬಳಸಿಕೊಳ್ಳಬೇಕು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಬ್ರಿಕ್ಸ್ ವೇದಿಕೆಯಲ್ಲಿ ಹೇಳಿದ ಈ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಲಾವ್ರೊವ್ ಪ್ರಕಾರ, ಪಾಕಿಸ್ತಾನ ಕೆಲ ಮಟ್ಟಿಗೆ ಮಧ್ಯವರ್ತಿತ್ವದ ಪಾತ್ರ ವಹಿಸಬಹುದಾದರೂ, ದೀರ್ಘಕಾಲೀನ ಶಾಂತಿ ಸ್ಥಾಪಿಸಲು ಭಾರತದಂತಹ ವಿಶ್ವಾಸಾರ್ಹ ದೇಶದ ಬೆಂಬಲ ಅಗತ್ಯವಿದೆ. ಹಲವು ಅಂತಾರಾಷ್ಟ್ರೀಯ ಸಮಸ್ಯೆಗಳಲ್ಲಿ ಭಾರತ ತೋರಿದ ರಾಜತಾಂತ್ರಿಕ ಸಮತೋಲನವೇ ಅದರ ದೊಡ್ಡ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದೊಂದಿಗೆ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲೇ ರಷ್ಯಾದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇರಾನ್ ಬಿಕ್ಕಟ್ಟಿನ ನಡುವೆ ಟ್ರಂಪ್ ತಮ್ಮ ಜಾಗತಿಕ ಇಮೇಜ್ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಚರ್ಚೆಯೂ ಜೋರಾಗಿದೆ.

ಪಾಕಿಸ್ತಾನದ ವಿಶ್ವಾಸಾರ್ಹತೆ ಕುರಿತು ಈಗಾಗಲೇ ಹಲವು ಪ್ರಶ್ನೆಗಳು ಎದ್ದಿದ್ದು, ಇತ್ತೀಚಿನ ಬೆಳವಣಿಗೆಗಳ ನಂತರ ಭಾರತವೇ ಉತ್ತಮ ಮಧ್ಯವರ್ತಿಯಾಗಬಹುದು ಎಂಬ ಅಭಿಪ್ರಾಯ ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !