ಬೌಲಿಂಗ್‌ನಲ್ಲಿ ಮಂಕಾದ ಭಾರತ: ಆಸ್ಟ್ರೇಲಿಯಾಗೆ 4 ವಿಕೆಟ್ ಗಳ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

208 ರನ್ ಸಿಡಿಸಿದ ಟೀಂ ಇಂಡಿಯಾ, ಬೌಲಿಂಗ್‌ನಲ್ಲಿ ಸಫಲತೆ ಸಾಧಿಸಲು ವಿಫಲವಾಗಿದ್ದು,ಇದರ ಪರಿಣಾಮ, ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದೆ.

209 ರನ್ ಬೃಹತ್ ಟಾರ್ಗೆಟ್ ಪಡೆದಿದ್ದ ಆಸ್ಟ್ರೇಲಿಯಾ ಡಿಸೆಂಟ್ ಆರಂಭ ಪಡೆಯಿತು. ನಾಯಕ ಆ್ಯರೋನ್ ಫಿಂಚ್ ಕ್ಯಾಮರೋನ್ ಗ್ರೀನ್ 39 ರನ್ ಜೊತೆಯಾಟ ನೀಡಿದರು. ಆದರೆ ಫಿಂಚ್ ಅಬ್ಬರ 22 ರನ್‌ಗೆ ಔಟಾದರು. ಬಳಿಕ ಕ್ಯಾಮರೊನ್ ಗ್ರೀನ್ ಹಾಗೂ ಸ್ಟೀವನ್ ಸ್ಮಿತ್ ಜೊತೆಯಾಟ ವೇಗವಾಗಿ ರನ್ ಕಲೆಹಾಕಿತು. ಕೇವಲ 30 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 61 ರನ್ ಸಿಡಿಸಿ ಗ್ರೀನ್ ಔಟಾದರು.

ಇತ್ತ ಸ್ಟೀವನ್ ಸ್ಮಿತ್ 24 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಕೂಡ ಪತನಗೊಂಡಿತು.
ಸತತ ವಿಕೆಟ್ ಪತನ ಆಸ್ಟ್ರೇಲಿಯಾ ತಂಡದಲ್ಲಿ ಆತಂಕ ಹೆಚ್ಚಿಸಿತು. ಜೋಶ್ ಇಂಗ್ಲಿಸ್ 17 ರನ್ ಸಿಡಿಸಿ ಔಟಾದರು.ಆದರೆ ಟಿಮ್ ಡೇವಿಡ್ ಹಾಗೂ ಮಾಥ್ಯೂ ವೇಡ್ ಹೋರಾಟ ಪಂದ್ಯದ ಗತಿಯನ್ನು ಬದಲಿಸಲು ಆರಂಭಿಸಿತು. ವೇಡ್ ಹಾಗೂ ಡೇವಿಡ್ ಹೋರಾಟದಿಂದ ಆಸ್ಟ್ರೇಲಿಯಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ 18 ರನ್ ಅವಶ್ಯಕತೆ ಇತ್ತು.

19ನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ಸತತ ಮೂರು ಬೌಂಡರಿ ಸಿಡಿಸಿ ಗೆಲುವು ಖಚಿತಪಡಿಸಿದರು. ಅಂತಿಮ ಓವರ್‌ನಲ್ಲಿ ಕೇವಲ 2 ರನ್ ಅವಶ್ಯಕತೆ ಇತ್ತು. ಈ ವೇಳೆ ಟಿಮ್ ಡೇವಿಡ್ 18 ರನ್ ಸಿಡಿಸಿ ಔಟಾದರು. ಆದರೆ ಆಸ್ಟ್ರೇಲಿಯಾ ನಿರಾಯಾಸವಾಗಿ 4 ವಿಕೆಟ್ ಗೆಲುವು ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!