ಕುಸಿದ ಲಂಕೆ ನೆರವಿಗೆ ನಿಂತ ಭಾರತ; 24 ಗಂಟೆಯಲ್ಲಿ 76 ಸಾವಿರ ಟನ್ ಇಂಧನ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆರ್ಥಿಕ ಬಿಕ್ಕಟ್ಟಿನಿಂದ ಕುಸಿದಿರುವ ನೆರೆರಾಷ್ಟ್ರ ಶ್ರೀಲಂಕಾಕ್ಕೆ ಭಾರತವು ಸಾಧ್ಯವಿರುವ ಎಲ್ಲಾ ಸಹಾಯಹಸ್ತಗಳನ್ನು ಚಾಚುತ್ತಿದೆ. ದೇಶದ ಆಂತರಿಕ ಅಗತ್ಯಗಳಿಗೆ ನೆರವಾಗಲು ನೆರವಾಗಲು ಭಾರತ ಆ ದೇಶಕ್ಕೆ ಇಂಧನ ರವಾನೆ ಮಾಡುತ್ತಿದೆ.
ಭಾರತವು ಶ್ರೀಲಂಕಾಕ್ಕೆ ಕಳೆದ 24 ಗಂಟೆಗಳಲ್ಲಿ ಒಟ್ಟು 76,000 ಟನ್ ಇಂಧನವನ್ನು ಪೂರೈಕೆ ಮಾಡಿದೆ. ಈ ಮೂಲಕ ಭಾರತದ ನೆರವಿನೊಂದಿಗೆ ಲಂಕಾಕ್ಕೆ ಕಳುಹಿಸಲಾದ ಒಟ್ಟು ಇಂಧನವು 2,70,000 ಟನ್‌ಗಳಿಗೂ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 36,000 ಟನ್‌ ಪೆಟ್ರೋಲ್ ಮತ್ತು 40,000 ಟನ್ ಡೀಸೆಲ್ ಶ್ರೀಲಂಕಾಕ್ಕೆ ತಲುಪಿದೆ ಎಂದು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ.
ಸಂಕಷ್ಟದಲ್ಲಿರುವ ಸಮಯದಲ್ಲಿ ನೆರವಿಗೆ ಬರುತ್ತಿರುವ ಭಾರತದ ಮಾನವೀಯ ಕಾರ್ಯಗಳಿಗೆ ಶ್ಲಾಘಿಸಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದಿದ್ದು, ದಾರುಣ ಸ್ಥಿಯಲ್ಲಿರುವ ತಮ್ಮ ದೇಶಕ್ಕೆ ಸಹಾಯಹಸ್ತ ಚಾಚಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!