‘ವಿಶ್ವಕಪ್ ಫೈನಲ್‌ನಲ್ಲಿ ನಮಗೆ ಭಾರತವೇ ಎದುರಾಳಿಯಾಗಿ ಸಿಗಬೇಕು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐಸಿಸಿ ಟಿ 20 ಸೆಮಿ ಫೈನಲ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಸೀದ ಫೈನಲ್ ತಲುಪಲಿದೆ.

ಈಗಾಗಲೇ ನ್ಯೂಜಿಲೆಂಡ್ ಮಣಿಸಿ ಫೈನಲ್ ತಲುಪಿರುವ ಪಾಕಿಸ್ತಾನಕ್ಕೆ ಎದುರಾಳಿಯಾಗಿ ಭಾರತವೇ ಬೇಕಂತೆ, ಹೀಗೆನ್ನುತ್ತಿದ್ದಾರೆ ಪಾಕ್ ತಂಡದ ಮೆಂಟರ್ ಮ್ಯಾಥ್ಯೂ ಹೆಡನ್.

ಫೈನಲ್ ಪಂದ್ಯದಲ್ಲಿ ನಮ್ಮ ಎದುರಾಳಿಯಾಗಿ ಭಾರತ ಬರಲಿ ಎಂದು ಬಯಸುತ್ತೇವೆ. ಭಾರತ- ಪಾಕ್ ಪಂದ್ಯದಲ್ಲಿ ಇರುವಷ್ಟು ರೋಚಕತೆ ಇನ್ಯಾವ ಪಂದ್ಯಕ್ಕೂ ಇಲ್ಲ ಎಂದು ಮ್ಯಾಥ್ಯೂ ಹೇಳಿದ್ದಾರೆ.

ನಮ್ಮ ತಂಡ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ನಮ್ಮ ವಿರುದ್ಧ ಪಂದ್ಯಕ್ಕೆ ಬರಲಿ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!