Friday, June 2, 2023

Latest Posts

ಭಾರತ vs ದಕ್ಷಿಣ ಆಫ್ರಿಕಾ: ಮೂರನೇ ದಿನದಾಟ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಆರಂಭವಾಗಿದೆ. ಎರಡನೇ ದಿನದ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ 58 ರನ್‌ಗಳ ಮುನ್ನಡೆ ಭಾರತಕ್ಕಿದೆ. ಇಂದಿನ ಆಟದಲ್ಲೂ ಈ ಅಂತರ ಕಾಯ್ದುಕೊಳ್ಳಬೇಕಿದೆ.

ಇಂದು ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರಾ ಫೀಲ್ಡ್‌ಗಿಳಿಯಲಿದ್ದು, ಇಬ್ಬರ ಮೇಲೆ ತಂಡ ಭರವಸೆ ಇಟ್ಟಿದೆ. ಬಹಳ ದಿನಗಳಿಂದ ಇವರಿಬ್ಬರೂ ಫಾರ್ಮ್‌ನಲ್ಲಿ ಇರಲಿಲ್ಲ, ಇದೀಗ ಫಾರ್ಮ್‌ಗೆ ವಾಪಾಸಾಗಲು ಅವಕಾಶ ದೊರೆತಿದೆ. ಈ ಅವಕಾಶವನ್ನು ಇವರಿಬ್ಬರು ಹೇಗೆ ಬಳಸಿಕೊಳ್ಳುತ್ತಾರೆ ಕಾದುನೋಡಬೇಕಿದೆ.
ಕೋಚ್ ದ್ರಾವಿಡ್ ಕೂಡ ಪೂಜಾರಾ ಫಾರ್ಮ್‌ಗೆ ಬಂದು ಬ್ಯಾಟಿಂಗ್ ಮಾಡಿದರೆ ಗೆಲುವು ನಮ್ಮದೇ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!