ಪಾಕ್ ವಿರುದ್ಧ ಗೆದ್ದ ಇಂಡಿಯಾ: ಹಾರ್ದಿಕ್ ಪಾಂಡ್ಯಗೆ ಟಿವಿ ಪರದೆ ಮೇಲೆ ಮುತ್ತಿಟ್ಟ ಆಫ್ಘಾನ್ ಫ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ವಿಶ್ವಾದ್ಯಂತ ಇರುವ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮಮನೆ ಮಾಡಿತು.

ಅಫ್ಘಾನಿಸ್ತಾನ ಅಭಿಮಾನಿಗಳು ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಇಂಡೋ ಪಾಕ್ ಪಂದ್ಯವನ್ನು ಟಿವಿ ಮುಂದೆ ಕುಳಿತು ನೋಡುತ್ತಿದ್ದ ಆಫ್ಘಾನಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ.

ಓರ್ವ ಅಭಿಮಾನಿ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ ಹಾರ್ದಿಕ್ ಪಾಂಡ್ಯಗೆ ತನ್ನ ಟಿವಿ ಸ್ಕ್ರೀನ್ ಮೇಲೆ ಮುತ್ತಿಕ್ಕಿ ಗಮನಸೆಳೆದಿದ್ದಾನೆ.

ಭರ್ಜರಿ ಸಿಕ್ಸರ್ ಮೂಲಕ ಪಾಂಡ್ಯ ಭಾರತಕ್ಕೆ ರೋಚಕ 5 ವಿಕೆಟ್ ಗೆಲುವು ತಂದುಕೊಟ್ಟರು. ಈ ವೇಳೆ ಪಾಂಡ್ಯ ಟಿವಿ ಸ್ಕ್ರೀನ್ ಮೇಲೆ ಕಾಣುತ್ತಿದ್ದಂತೆ ಕುಳಿತದಲ್ಲಿಂದ ಎದ್ದು ಬಂದು ಪಾಂಡ್ಯಗೆ ಪರದೆ ಮೇಲೆ ಮುತ್ತಿಕ್ಕಿದ್ದಾನೆ.

ಈ ವಿಡಿಯೋ ವೈರಲ್ ಆಗಿದೆ. ಆಫ್ಘಾನಿಸ್ತಾನದ ಮನೆಯೊಂದರಲ್ಲಿ ಹಲವರು ಕುಳಿತು ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ ಬೆನ್ನಲ್ಲೇ ಸಂಭ್ರಮ ಮನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!