ಭಾರತ ಮೂಲದ ನತಾಶಾಳಿಗೆ ಮತ್ತೊಮ್ಮೆ ಜಗತ್ತಿನ ಪ್ರತಿಭಾವಂತ ವಿದ್ಯಾರ್ಥಿನಿ ಪಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಸತತ ಎರಡನೇ ಭಾರಿಯೂ ವಿಶ್ವದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾಳೆ.

ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ ಗೌಡಿನೀರ್ ಮಿಡಲ್ ಸ್ಕೂಲ್‌ ನಲ್ಲಿ ವ್ಯಾಸಂಗ ಮಾಡುತ್ತಿರುವ ನತಾಶಾ ಪೆರಿ ಎಸ್ಎಟಿ ಮತ್ತು ಎಸಿಟಿ ಪರೀಕ್ಷೆಗಳಿಗೆ ಹಾಜರಾಗಿದ್ದರು. ಜಾನ್ಸ್ ಹಾಪ್ಕಿನ್ಸ್ ಕೇಂದ್ರದಲ್ಲಿ ಟ್ಯಾಲೆಂಟೆಡ್ ಯೂತ್ ಟ್ಯಾಲೆಂಟ್ (ವಿಟಿವೈ) ಶೋಧದ ಭಾಗವಾಗಿ ತೆಗೆದುಕೊಂಡಿದ್ದ ಮೌಲ್ಯಮಾಪನದಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಪ್ರಶಂಸೆಯನ್ನು ಪಡೆದಿದ್ದಾರೆ.

CTY ದರ್ಜೆಯ ಮಟ್ಟದ ಪರೀಕ್ಷೆಯನ್ನು ಪ್ರಪಂಚದಾದ್ಯಂತದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಅವರ ನಿಜವಾದ ಶೈಕ್ಷಣಿಕ ಸಾಮರ್ಥ್ಯಗಳನ್ನು ಕಂಡುಹಿಡಿಯಲು ಬಳಸಲಾಗುತ್ತದೆ. ಸಿಟಿವೈ ಸಂಸ್ಥೆಯು 76 ದೇಶಗಳ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ “ವಿಶ್ವದ ಪ್ರತಿಭಾವಂತ ವಿದ್ಯಾರ್ಥಿನಿ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ನತಾಶಾ ಸ್ಥಾನ ಪಡೆದುಕೊಂಡಿದ್ದಾಳೆ.

ಸಿಟಿವೈ ನಲ್ಲಿ ವಿದ್ಯಾರ್ಥಿಯ ಗ್ರೇಡ್ ಗಿಂತಲೂ ಹೆಚ್ಚಿನ ಬೌದ್ಧಿಕ ಮಟ್ಟದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಗ್ರೇಡ್ 8 ಕ್ಕೂ ಮೇಲ್ಪಟ್ಟ ಬೌದ್ಧಿಕ ಕ್ಷಮತೆಯನ್ನು ಪೆರಿ ಪ್ರದರ್ಶಿಸಿದ್ದಾರೆ.

ನತಾಶಾ 2021ರಲ್ಲಿ ಗ್ರೇಡ್ 5 ವಿದ್ಯಾರ್ಥಿಯಾಗಿದ್ದಾಗ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (CTY) ಪರೀಕ್ಷೆಯನ್ನು ತೆಗೆದುಕೊಂಡಿದ್ದಳು. ಎಲ್ಲಾ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಶ್ರೇಣಿಯನ್ನು ಪಡೆದುಕೊಂಡಿದ್ದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!