ಚೀನಾ ಗಡಿಯ ಪೂರ್ವ ಲಡಾಖ್‌ನಲ್ಲಿ ಸೈನಿಕರ ದಾಹ ನೀಗಿಸಲು ಕೊಳಗಳ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದಿಂದ ಯಾವುದೇ ದುಸ್ಸಾಹಸವನ್ನು ತಡೆಗಟ್ಟಲು ನೈಜ ನಿಯಂತ್ರಣ ರೇಖೆಯ ಬಳಿ (ಎಲ್‌ಎಸಿ) ಸೈನ್ಯವನ್ನು ನಿಯೋಜಿಸಿದ ಬಳಿಕ ಭಾರತೀಯ ಸೇನೆ ಶೀತ ಚಳಿಗಾಲದಲ್ಲಿಯೂ ಸೈನಿಕರಿಗೆ ತಾಜಾ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೊಳಗಳ ನಿರ್ಮಾಣ ಕಾರ್ಯ ಕೈಗೊಂಡಿದೆ. ಪೂರ್ವ ಲಡಾಖ್‌ನಲ್ಲಿ ಏಪ್ರಿಲ್-ಮೇ 2020 ರಿಂದ ಚೀನಾದ ಆಕ್ರಮಣ ನೀತಿ ತಡೆಯಲು ಭಾರತವು 50,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಅಲ್ಲಿ ನೆಲೆಗೊಂಡಿರುವ ಸೈನಿಕರ ಮೂಲಭೂತ ಅಗತ್ಯತೆಗಳನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸೈನಿಕರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ನಾವು ದೊಡ್ಡ ಸಂಖ್ಯೆಯಲ್ಲಿ ಕೊಳಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ದೌಲತ್ ಬೇಗ್ ಓಲ್ಡಿ (DBO) ಸೇರಿದಂತೆ ಹಲವು ಸ್ಥಳಗಳಲ್ಲಿ ಚಳಿಗಾಲದಲ್ಲೂ ಕೊಳಗಳಿಂದ ಶುದ್ಧ ನೀರನ್ನು ಸಿಗುಂತೆ ಮಾಡಿದ್ದೇವೆ ಎಂದು ಭಾರತೀಯ ಸೇನೆಯ ಇಂಜಿನಿಯರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಹೇಳಿದ್ದಾರೆ. ಮೇಲ್ಮೈ ಮಟ್ಟದಲ್ಲಿನ ನೀರು ತೀವ್ರವಾದ ಚಳಿಗಾಲದಲ್ಲಿ ಹೆಪ್ಪುಗಟ್ಟಿದರೂ ಅದರ ಕೆಳಭಾಗದಲ್ಲಿ ದ್ರವ ರೂಪ ಸಿಗಲಿದೆ.

ಈ ಪ್ರದೇಶಗಳಲ್ಲಿನ ತಾಪಮಾನವು ಕೆಲವು ಸಂದರ್ಭಗಳಲ್ಲಿ ಮೈನಸ್ 40 ಡಿಗ್ರಿಗಿಂತ ಕಡಿಮೆಯಿರುತ್ತದೆ ಆ ಸಮಯದಲ್ಲಿ ಸೈನಿಕರಿಗೆ  ಶುದ್ಧ ನೀರು ಮತ್ತು ಆಹಾರವನ್ನು ಒದಗಿಸುವುದು ಒಂದು ಸವಾಲಾಗಿದೆ. ಕಾರ್ಪ್ಸ್ ಆಫ್ ಇಂಜಿನಿಯರ್‌ಗಳು ಚೀನಾದ ಗಡಿಯ ಸಮೀಪವಿರುವ ಸ್ಥಳಗಳಲ್ಲಿ ಸೈನಿಕರಿಗೆ ಸಹಾಯ ಮಾಡಲು ಮತ್ತು ಅಲ್ಲಿ ಉತ್ತಮ ಜೀವನ ಪರಿಸ್ಥಿತಿಗಳನ್ನು ಕಲ್ಪಿಸಿಕೊಡಲು
ಇದುವರೆಗೆ 22,000 ಹೆಚ್ಚುವರಿ ಆವಾಸಸ್ಥಾನಗಳನ್ನು ನಿರ್ಮಿಸಿದೆ.

ಕಟ್ಟಡಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಎತ್ತುವ ಮತ್ತು ನಿರ್ದಿಷ್ಟ ವಲಯಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸ್ಥಳಾಂತರಿಸುವ ರೀತಿಯಲ್ಲಿ ಅವುಗಳನ್ನು ನಿರ್ಮಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!