ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ, ಪ್ರಶಸ್ತಿ ಪಡೆದ 10ನೇ ರತ್ನ ಅಪ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಇಲ್ಲಿಯವರೆಗೂ ಕೇವಲ ಒಂಬತ್ತು ಮಂದಿ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಈ ಸಾಲಿಗೆ ಪುನೀತ್ ರಾಜ್ ಕುಮಾರ್ ಸೇರಿದ್ದಾರೆ. ಮರಣೋತ್ತರ ಪ್ರಶಸ್ತಿ ಪಡೆಯುತ್ತಿರುವ ಮೊದಲ ರತ್ನ ಪುನೀತ್ ರಾಜ್‌ಕುಮಾರ್ ಆಗಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ರತ್ನಗಳಿಗೆ ಈ ಗೌರವ ಸಲ್ಲುತ್ತದೆ. ಅವರ ಕೊಡುಗೆಯನ್ನು ಗಮನಿಸಿ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುತ್ತದೆ. ಪುನೀತ್ ರಾಜ್ ಕುಮಾರ್, ಸಿನಿಮಾ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಮಾಡಿದ್ದಾರೆ. ಇದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸಿನಿಮಾ ಕ್ಷೇತ್ರಕ್ಕೆ ಪ್ರಶಸ್ತಿ ಲಭಿಸುತ್ತಿರುವುದು ಎರಡನೇ ಬಾರಿ, ಮೊದಲ ಬಾರಿ ಡಾ. ರಾಜ್‌ಕುಮಾರ್ ಅವರು ಪ್ರಶಸ್ತಿ ಪಡೆದಿದ್ದರು.

ಈ ಪ್ರಶಸ್ತಿಯಲ್ಲಿ 50 ಗ್ರಾಂ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಶಾಲು ಸೇರಿದೆ. 2021ರ ನವೆಂಬರ್‌ನಲ್ಲಿ ಪುನೀತ್ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.

ಹತ್ತು ರತ್ನಗಳು

  1. ಕುವೆಂಪು
  2. ಡಾ. ರಾಜ್‌ಕುಮಾರ್
  3. ಎಸ್. ನಿಜಲಿಂಗಪ್ಪ
  4. ಸಿ.ಎನ್. ಆರ್. ರಾವ್
  5. ದೇವಿಪ್ರಸಾದ್ ಶೆಟ್ಟಿ
  6. ಭೀಮ್‌ಸೇನ್ ಜೋಶಿ
  7. ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು
  8. ದೇ. ಜವರೇಗೌಡ
  9. ವೀರೇಂದ್ರ ಹೆಗ್ಗಡೆ
  10. ಪುನೀತ್ ರಾಜ್ ಕುಮಾರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!