ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಅಮೆರಿಕಕ್ಕೆ ಭಾರತದಲ್ಲಿ ಬೆಳೆದ ಮಾವು ಹಾಗೂ ದಾಳಿಂಬೆ ರಫ್ತಾಗಲಿದೆ.
ಈ ಬಗ್ಗೆ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದ್ದು, 2021ರಲ್ಲಿ 12ನೇ ಭಾರತ ಹಾಗೂ ಅಮೆರಿಕ ವ್ಯಾಪಾರ ನೀತಿ ವೇದಿಕೆ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ 2 Vs 2 ಕೃಷಿ ಮಾರುಕಟ್ಟೆ ಒಪ್ಪಂದದ ಅನುಸಾರ ಆಮದು ಹಾಗೂ ರಫ್ತು ನಡೆಯಲಿದೆ ಎಂದು ತಿಳಿಸಿದೆ.
ಅಮೆರಿಕಕ್ಕೆ ಭಾರತದಿಂದ ಮಾವು, ದಾಳಿಂಬೆ ಆರಿಲ್ ಅನ್ನು ಅಮೆರಿಕಕ್ಕೆ ರಫ್ತು ಮಾಡಲಾಗುವುದು.ದಾಳಿಂಬೆ ಆರಿಲ್ ರಫ್ತು 2022ರ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ. ಅಮೆರಿಕದಿಂದ ಚೆರ್ರಿ, ಅಲ್ಫಾಲ್ಫಾ ಹೇ ಗಳನ್ನು ಭಾರತದ ಮಾರುಕಟ್ಟೆಗೆ ತರಲಾಗುತ್ತದೆ. ಈ ಪ್ರಕ್ರಿಯೆ ಫೆಬ್ರವರಿಯಿಂದ ಪ್ರಾರಂಭವಾಗಲಿದೆ.