ಹೊಸದಿಗಂತ ಡಿಜಿಟಲ್ ಡೆಸ್ಕ್:
32 ವರ್ಷದ ಭಾರತೀಯ ಪ್ರಜೆ ಮೊಹಮದ್ ರಹಮತುಲ್ಲಾ ಸೈಯದ್ ಅಹ್ಮದ್ ಆಸ್ಟ್ರೇಲಿಯಾ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕ್ಲೀನರ್‌ಗೆ ಇರಿದು ಪೊಲೀಸ್ ಅಧಿಕಾರಿಗಳಿಗೆ ಚಾಕುವಿನಿಂದ ಬೆದರಿಸಿದ ಕಾರಣಕ್ಕಾಗಿ ಗುಂಡು ಹಾರಿಸಲಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಅಹ್ಮದ್ ಭಾರತದ ತಮಿಳುನಾಡಿನವರಾಗಿದ್ದು, ಬ್ರಿಡ್ಜಿಂಗ್ ವೀಸಾದಲ್ಲಿ ಆಬರ್ನ್‌ನಲ್ಲಿ ವಾಸಿಸುತ್ತಿದ್ದರು ಎಂದು ಆಸ್ಟ್ರೇಲಿಯಾದ ಭಾರತೀಯ ಕಾನ್ಸುಲೇಟ್ ಜನರಲ್ ಗುರುತಿಸಿದ್ದಾರೆ.
ಘಟನೆಯಲ್ಲಿ ಮಾನಸಿಕ ಆರೋಗ್ಯದ ಪಾತ್ರವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಹ್ಮದ್ ಕ್ಲೀನರ್‌ಗೆ ಇರಿದ ಬಳಿಕ ಪೊಲೀಸ್ ಅಧಿಕಾರಿಗಳನ್ನು ಚಾಕುವಿನಿಂದ ಬೆದರಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ 12.03 ಗಂಟೆಗೆ ಸಿಡ್ನಿಯ ಪಶ್ಚಿಮದಲ್ಲಿ ಘಟನೆ ನಡೆದಿದೆ.
ಹಿರಿಯ ಅಧಿಕಾರಿ ಮೂರು ಗುಂಡುಗಳನ್ನು ಹಾರಿಸಿದರು, ಅದರಲ್ಲಿ ಎರಡು ಗುಂಡುಗಳು ಸೈಯದ್ ಅಹ್ಮದ್ ಅವರ ಎದೆಗೆ ಹೊಡೆದಿವೆ. ವೈದ್ಯರು ಸ್ಥಳದಲ್ಲಿಯೇ ಸೈಯದ್‌ಗೆ ಚಿಕಿತ್ಸೆ ನೀಡಿ ವೆಸ್ಟ್‌ಮೀಡ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, 1:30 ರ ನಂತರ ಸಾವನ್ನಪ್ಪಿದ್ದಾರೆ.