ವರ್ಷದಿಂದ ವರ್ಷಕ್ಕೆ ಬಿಸಿಯೇರುತ್ತಿದೆ ಹಿಂದೂ ಮಹಾಸಾಗರ: ಇನ್ನು ಉಷ್ಣ ಅಲೆ, ಚಂಡಮಾರುತ ಶಾಶ್ವತ?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯಷ್ಟೇ ಅಲ್ಲ, ಹಿಂದೂ ಮಹಾಸಾಗರದ ತಾಪಮಾನ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವಗುದು ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊಂಡಿದೆ.
ಸಾಗರದಲ್ಲಿ ರಾಪಮಾನ ಏರಿಕೆಯಾಗುತ್ತಲೇ ಇದ್ದು, 2020ರಿಂದ 2100ರ ನಡುವೆ 1.4 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನದ ವರದಿ ಹೇಳಿದೆ.
ಈ ಬೆಳವಣಿಗೆಯಿಂದ ಭೂಮಿಯಲ್ಲಿ ಕೂಡಾ ಶಾಶ್ವತ ಉಷ್ಣ ಅಲೆಯ ಪರಿಸ್ಥಿತಿ ಉಂಟಾಗಬಹುದು. ಅಲ್ಲದೆ ಚಂಡಮಾರುತಗಳು ತೀವ್ರಗೊಂಡು, ಮುಂಗಾರಿನ ಮೇಲೆ ಕೂಡಾ ಪರಿಣಾಮ ಬೀರಬಹುದು ಎಂದು ಈ ವರದಿ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!