ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತೀಯರಿಗೆ ಕಬ್ಬಿಣದ ಉಪಯೋಗ ತಿಳಿದಿತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯರಿಗೆ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಕಬ್ಬಿಣದ ಬಳಕೆ ತಿಳಿದಿತ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಉತ್ಖನನದ ವೇಳೆ ದೊರಕಿದ ಅವಶೇಷಗಳು ಈ ಸತ್ಯವನ್ನು ಪ್ರಮಾಣೀಕರಿಸಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೈಲಾಡುಂಪರೈನಲ್ಲಿ ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಉತ್ಖನನದ ವೇಳೆ ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾದ ಲೋಹದ ಸಾಂಸ್ಕೃತಿಕ ನಿಕ್ಷೇಪಗಳು ದೊರಕಿವೆ. ಅವುಗಳನ್ನು ಇಂಗಾಲ ಪರೀಕ್ಷೆ (ಕಾರ್ಬಲ್‌ ಟೆಸ್ಟ್)ಗೆ ಒಳಪಡಿಸಿದಾಗ ಅವುಗಳು ಕ್ರಿಸ್ತಪೂರ್ವ 2172 ಕಾಲದ್ದೆಂದು ತಿಳಿದುಬಂದಿದೆ. ಇದು ಭಾರತೀಯ ಸಮಾಜವು 4,200 ವರ್ಷಗಳ ಹಿಂದೆಯೇ ಲೋಹಗಳ ಬಳಕೆಯನ್ನು ತಿಳಿದಿತ್ತು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಈ ಕುರಿತು ಸಂಗಮ ಕಾಲದಲ್ಲಿನ ಕೆಲವು ಸಾಹಿತ್ಯಗಳಲ್ಲಿ ಕಬ್ಬಿಣದ ಬಗ್ಗೆ ಉಲ್ಲೇಖ ಇರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!