WOMEN| ಅಬ್ಬಬ್ಬಾ..ಮೇಕಪ್‌ಗಾಗಿ ಭಾರತೀಯ ಹೆಂಗಳೆಯರು ಖರ್ಚು ಮಾಡಿದ್ತಾರೆ ಸಾವಿರಾರು ಕೋಟಿ ರೂ.!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಕಪ್‌ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ..ಅದರಲ್ಲೂ ಹೆಣ್ಮಕ್ಕಳು ಮುಂದಿರುತ್ತಾರೆ. ಒಂದು ಸರ್ವೆ ಪ್ರಕಾರ ಭಾರತೀಯ ಹೆಣ್ಮಕ್ಕಳು ತಮ್ಮ ಮೇಕಪ್‌ಗಾಗಿ 5,000 ಕೋಟಿ ರೂ ಖರ್ಚು ಮಾಡಿದ್ದಾರಂತೆ..ಅದೂ ಆರು ತಿಂಗಳಲ್ಲಿ. ಆಶ್ಚರ್ಯ ಅನಿಸಿದರೂ ಈ ʻಸುಂದರʼ ಸತ್ಯವನ್ನು ನಂಬಲೇಬೇಕಿದೆ.

ಕ್ರೀಂ, ಲಿಪ್ ಸ್ಟಿಕ್, ನೇಲ್ ಪಾಲಿಶ್, ಐಲೈನರ್, ಇತ್ಯಾದಿ ಸೌಂದರ್ಯವರ್ಧಕಗಳಿಗಾಗಿ ಭಾರತೀಯ ಮಹಿಳೆಯರು ಆರು ತಿಂಗಳಲ್ಲಿ 5,000 ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ʻಕಾಂತಾರ್ ವರ್ಲ್ಡ್ ಪ್ಯಾನೆಲ್ʼ ವರದಿ ಬಹಿರಂಗಪಡಿಸಿದೆ. ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ..ವ್ಯಾಪಾರದಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ. ಅವರ ಕೆಲಸಕ್ಕನುಗುಣವಾಗಿ ಮೇಕಪ್ ಸಾಮಾನ್ಯವಾಗಿದೆ.

Quick makeup tips for working women

ಉದಾಹರಣೆಗೆ, ರಿಸಪ್ಷನಿಸ್ಟ್, ಗಗನಸಖಿಯರು. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಸಿನಿಮಾ/ಸೀರಿಯರ್ ನಟಿಯರು, ಹೊರತಾಗಿ ಎಲ್ಲಾ ಹೆಣ್ಣುಮಕ್ಕಳೂ ಈಗ ಮೇಕಪ್‌ ಮೊರೆ ಹೋಗಿದ್ದಾರೆ. ಅವರವರ ಕೆಲಸದ ಆಧಾರದ ಮೇಲೆ ಮೇಕಪ್ ಅಗತ್ಯವಿದೆ.

ಮೇಕಪ್ ಉಪಕರಣಗಳಿಗಾಗಿ, ಕಳೆದ ಆರು ತಿಂಗಳಲ್ಲಿ ಭಾರತದ 10 ನಗರಗಳಲ್ಲಿ ಮಹಿಳೆಯರು 100 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಲಿಪ್‌ಸ್ಟಿಕ್, ನೇಲ್ ಪಾಲಿಷ್ ಮತ್ತು ಐಲೈನರ್‌ಗಳನ್ನು ಖರೀದಿಸಿದ್ದಾರೆ. 40 ರಷ್ಟು ಮಹಿಳೆಯರು ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ ಎಂದು ವರದಿ ಹೇಳಿದೆ.

Why Did We Start Wearing Makeup? | Britannica

ಒಬ್ಬ ಭಾರತೀಯ ಹೆಣ್ಣುಮಗಳು ಕನಿಷ್ಟ 1,214ರೂಪಾಯಿ ಸೌಂದರ್ಯವರ್ಧಕಗಳಿಗಾಗಿ ಖರ್ಚು ಮಾಡುತ್ತಾರಂತೆ. ಅವುಗಳಲ್ಲಿ ಹೆಚ್ಚಿನವು ಲಿಪ್‌ಸ್ಟಿಕ್‌ ಆಗಿರುವುದು ಕಳವಳಕಾರಿ ಸಂಗತಿ. ಅದರ ನಂತರ, ನೇಲ್ ಪಾಲಿಶ್ ಸ್ಥಾನ ಪಡೆದಿದೆ.

ಶಾಪರ್ಸ್ ಸ್ಟಾಪ್ ವರದಿಯ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 1,50,000 ಮೇಕಪ್ ಕಿಟ್‌ಗಳು ತಮ್ಮ ಮಳಿಗೆಯಿಂದ ಮಾರಾಟವಾಗಿವೆ ಎಂದು ತಿಳಿಸಿದೆ. ಇದು ಭಾರತೀಯ ಗ್ರಾಹಕರಲ್ಲಿ ಮೇಕಪ್ ಲೇಖನಗಳು ಮತ್ತು ಬ್ರ್ಯಾಂಡ್‌ಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!