2022ರ ಐಪಿಎಲ್ ಭಾರತದಲ್ಲೇ ಆಯೋಜನೆ ಬಹುತೇಕ ಖಚಿತ: ಜಯ್​ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ರ ಐಪಿಎಲ್​​​ ಮಾರ್ಚ್​ ಕೊನೆ ವಾರದಿಂದ ಆರಂಭಗೊಂಡು, ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ.
ಬಿಸಿಸಿಐ ಇಂದು ಐಪಿಎಲ್​ನ ಎಲ್ಲ​ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ್ದು, ಬಳಿಕ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿದ ಜಯ್ ಶಾ, ಐಪಿಎಲ್ ಅನ್ನು ಭಾರತದಲ್ಲೇ ಆಯೋಜಿಸಬೇಕೆಂದು ಅನೇಕ ತಂಡದ ಮಾಲೀಕರು ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೀಗಾಗಿ, ಭಾರತದಲ್ಲೇ ಟೂರ್ನಿ ನಡೆಸಲು ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಾರಿ ಅಹಮದಾಬಾದ್ ಮತ್ತು ಲಕ್ನೋ ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಹೀಗಾಗಿ ಬಿಸಿಸಿಐ ಉತ್ಸುಕವಾಗಿದೆ. ಆದರೆ ಕ್ರಿಕೆಟ್​​ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ. ದೇಶದಲ್ಲಿ ಕೋವಿಡ್ ಹೊಸ ರೂಪಾಂತರ ಕಾಣಿಸಿಕೊಂಡಿರುವ ಕಾರಣ ಟೂರ್ನಿ ನಡೆಸಲು ಪ್ಲಾನ್​ ಬಿ ರೂಪಿಸಲಾಗಿದೆ ಎಂದರು.
ಇನ್ನು ಐಪಿಎಲ್​ ಮೆಗಾ ಹರಾಜು ನಡೆಸಲು ಫೆಬ್ರವರಿ 12-13 ನಿಗದಿಗೊಳಿಸಿದ್ದು, ಅದಕ್ಕೂ ಮುಂಚಿತವಾಗಿ ಐಪಿಎಲ್ ನಡೆಸುವ ಸ್ಥಳಗಳನ್ನ ಖಚಿತ ಪಡಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!