ಸೈಯದ್ ಮೋದಿ ಇಂಟರ್​ನ್ಯಾಷನಲ್​ ಟೂರ್ನಮೆಂಟ್​​: ಫೈನಲ್ ನಲ್ಲಿ ಭಾರತದವರೇ ಆದ ಸಿಂಧು-ಮಾಳವಿಕ ನಡುವೆ ಸ್ಪರ್ಧೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೈಯದ್ ಮೋದಿ ಇಂಟರ್​ನ್ಯಾಷನಲ್​ ಟೂರ್ನಮೆಂಟ್​​ನಲ್ಲಿ ಪಿವಿ ಸಿಂಧು ಗೆಲುವು ಸಾದಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರನ ಬಾಬು ಬನರಾಸಿ ಇಂಡೋರ್​ ಸ್ಟ್ರೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ರಷ್ಯಾದ ಇವ್ಗೇನಿಯಾ ಕೊಸೆತ್ಸ್ಕಾಯಾ ವಿರುದ್ಧ 21-11ರಲ್ಲಿ ಮೊದಲ ಗೇಮ್​ ಗೆದ್ದುಕೊಂಡರು. ಈ ವೇಳೆ ಪಂದ್ಯದಲ್ಲಿ ಮುಂದುವರಿಯಲಾಗದೆ ರಷ್ಯನ್ ಆಟಗಾರ್ತಿ ನಿವೃತ್ತಿಗೊಂಡರು. ಇದರಿಂದ ಸರಳವಾಗಿ ಸಿಂಧು ಫೈನಲ್ನತ್ತ ಲಗ್ಗೆ ಇಟ್ಟರು.
ಇದೀಗ ಸಿಂಧು ಫೈನಲ್​​ನಲ್ಲಿ ಭಾರತದವರೇ ಆದ 20 ವರ್ಷದ ಯುವ ಶಟ್ಲರ್​ ಮಾಳವಿಕ ಬನ್ಸೋಡ್​ ವಿರುದ್ಧ ಸೆಣಸಾಡಲಿದ್ದಾರೆ. ಬನ್ಸೋಡ್​ ಸೆಮಿಫೈನಲ್​ನಲ್ಲಿ ತಮ್ಮ ಸಹವರ್ತಿ 16 ವರ್ಷದ ಅನುಪಮ ಉಪಾಧ್ಯಾಯ ವಿರುದ್ಧ 3 ಸೆಟ್​ಗಳ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!