October 13, 2026
Tuesday, October 13, 2026
spot_img

ಹಾರ್ಮುಜ್ ಬಿಕ್ಕಟ್ಟಿನ ನಡುವೆ ಭಾರತದ ದೊಡ್ಡ ಸಾಹಸ! ತೈಲ ಸಾಗಣೆಗೆ ಸ್ಪೆಷಲ್ ವ್ಯವಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ತೈಲ ಸಾಗಣೆ ತೀವ್ರ ಅಸ್ತವ್ಯಸ್ತಗೊಂಡಿದೆ.

ವಿಶ್ವದ ಪ್ರಮುಖ ಕಚ್ಚಾ ತೈಲ ಮಾರ್ಗವಾಗಿರುವ ಈ ಭಾಗದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಭಾರೀ ಏರಿಕೆಯಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಬೀಳುತ್ತಿದೆ.

ತೈಲ ಭದ್ರತೆಗೆ ಭಾರತದ ಹೊಸ ಹೆಜ್ಜೆ

ಪರಿಸ್ಥಿತಿಯನ್ನು ಎದುರಿಸಲು ಭಾರತ ಮಹತ್ವದ ಯೋಜನೆ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಶಿಪ್ಪಿಂಗ್ ಕಾರ್ಪೊರೇಶನ್‌ಗೆ ಸೇರಿದ ಟ್ಯಾಂಕರ್‌ಗಳನ್ನು ಮತ್ತೆ ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆಗೆ ಕಳುಹಿಸುವ ಸಿದ್ಧತೆ ನಡೆದಿದೆ. ಮಧ್ಯಪ್ರಾಚ್ಯದ ತೈಲ ಉತ್ಪಾದಕ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಭಾರತಕ್ಕೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:

ಯುದ್ಧದ ಭೀತಿಯಲ್ಲಿ ಜಾಗತಿಕ ಚಿಂತೆ

ಇರಾನ್-ಅಮೆರಿಕ ಸಂಘರ್ಷ ತೀವ್ರಗೊಂಡ ಬಳಿಕ ಈ ಪ್ರದೇಶದಲ್ಲಿ ಸಾಗಣೆ ಅಪಾಯಕಾರಿಯಾಗಿದೆ. ಅಮೆರಿಕ ಮತ್ತು ಇರಾನ್ ಎರಡೂ ರಾಷ್ಟ್ರಗಳು ಜಲಸಂಧಿಯ ಮೇಲೆ ಪ್ರಭಾವ ಸಾಧಿಸಲು ಮುಂದಾಗಿರುವುದು ಆತಂಕ ಹೆಚ್ಚಿಸಿದೆ.

ಭಾರತೀಯ ನೌಕಾಪಡೆಯ ಭದ್ರತಾ ಕವಚ

ಭಾರತೀಯ ಟ್ಯಾಂಕರ್‌ಗಳಿಗೆ ರಕ್ಷಣೆ ಒದಗಿಸಲು ನೌಕಾಪಡೆ ಈ ಭಾಗದಲ್ಲಿ ಯುದ್ಧನೌಕೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ತೈಲ ಸರಬರಾಜು ವ್ಯತ್ಯಯವಾಗದಂತೆ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

Must Read