Thursday, June 30, 2022

Latest Posts

ಕೊರೊನಾ ಸೋಂಕಿನಲ್ಲಿ ಗಣನೀಯ ಇಳಿಕೆ: 1,569 ಹೊಸ ಪ್ರಕರಣಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,569 ಹೊಸ ಪ್ರಕರಣಗಳು  ಪತ್ತೆಯಾಗಿದ್ದು,  19 ಸಾವುಗಳು ವರದಿಯಾಗಿದೆ. ದೇಶದ ಒಟ್ಟಾರೆ ಸಾವಿನ ಸಂಖ್ಯೆ 52, 4260 ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 16,400 ರಷ್ಟಿದೆ, ಹಿಂದಿನ ದಿನಕ್ಕಿಂತ 917 ಪ್ರಕರಣಗಳು ಇಳಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಭಾರತದಲ್ಲಿ ಪ್ರಸ್ತುತ ಚೇತರಿಕೆಯ ಪ್ರಮಾಣವು 98.75% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 2,467 ಜನ ಚೇತರಿಸಿಕೊಂಡಿದ್ದಾರೆ. ಪಾಸಿಟಿವಿಟಿ ದರವು 0.44% ರಷ್ಟಿದೆ. ಸೋಂಕಿನಿದಂ ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ 4,25,84,710 ಕ್ಕೆ ಏರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss