ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸ್ವರಾ ಭಾಸ್ಕರ್ ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ. ಬಹುಕಾಲದ ಗೆಳೆಯ ಫಹಾದ್ ಮದುವೆಯಾದ ಸ್ವರಾ ಇದೀಗ ತಮ್ಮ ಫಸ್ಟ್ ನೈಟ್ನ ಫೋಟೊವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಬೆಡ್ರೂಂನಲ್ಲಿ ಬೆಡ್ ಅಲಂಕರಿಸಿರುವ ಫೋಟೊ ಹಾಕಿ ಫಿಲ್ಮಿ ಸುಹಾಗ್ರಾತ್ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ಎದುರಾಗಿದ್ದು, ಫಿಲ್ಮಿಯಾಗಿದೆ ಎಂದು ಕೆಲ ವರ್ಗದವರು ಹೇಳಿದ್ರೆ ಇದನ್ನೂ ಶೇರ್ ಮಾಡಿ ಪ್ರಚಾರ ಮಾಡ್ತೀರ ಎಂದು ಇನ್ನೊಂದು ವರ್ಗದ ಜನ ಹೇಳಿದ್ದಾರೆ.