35 ಲಕ್ಷ ಕಿ.ಮೀ ಗೆ ವಿಸ್ತರಿಸಿದೆ ಭಾರತದ ಆಪ್ಟಿಕಲ್‌ ಫೈಬರ್‌ ಜಾಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತು ಡಿಜಿಟಲ್‌ ಯುಗಕ್ಕೆ ದಾಪುಗಾಲಿಡುತ್ತಿರೋ ಸಮಯದಲ್ಲಿ ಭಾರತದ ಮೂಲೆ ಮೂಲೆಗೂ ಇಂಟರ್ನೆಟ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಆಪ್ಟಿಕಲ್‌ ಫೈಬರ್‌ ಅಳವಡಿಕೆಗೆ ಸರ್ಕಾರ ಒತ್ತು ನೀಡಿದ್ದು ಪ್ರಸ್ತುತ ದೇಶದಲ್ಲಿ 35ಲಕ್ಷ ರೂ35 ಲಕ್ಷ ರೂಟ್‌ ಕಿಲೋ ಮೀಟರ್‌ ಗಳಿಷ್ಟು ವಿಸ್ತಾರವಾಗಿ ಆಪ್ಟಿಕಲ್‌ ಫೈಬರ್‌ ಜಾಲವು ವ್ಯಾಪಿಸಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಸುಧಾರಿತ ಬ್ಯಾಂಡ್‌ವಿಡ್ತ್ ಮತ್ತು ಹೆಚ್ಚಿನ ಪ್ರಮಾಣದ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು OFC ನೆಟ್‌ವರ್ಕ್ ಸಹಾಯ ಮಾಡುತ್ತದೆ ಮತ್ತು ಭಾರತದಲ್ಲಿ 5G ತಂತ್ರಜ್ಞಾನದ ರೋಲ್-ಔಟ್ ಅನ್ನು ಬೆಂಬಲಿಸುವ ಸಾಮರ್ಥ್ಯ ಆಪ್ಟಿಕಲ್‌ ಫೈಬರ್‌ ವ್ಯವಸ್ಥೆಗಿದೆ. “ದೇಶದಲ್ಲಿ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 35.5 ಲಕ್ಷ ರೂಟ್ ಕಿಮೀ ಆಪ್ಟಿಕಲ್ ಫೈಬರ್ ಕೇಬಲ್ (OFC) ಅನ್ನು ಈಗಾಗಲೇ ಹಾಕಲಾಗಿದೆ, ಇದು ಉತ್ತಮ ಬ್ಯಾಂಡ್‌ವಿಡ್ತ್, ಸ್ಥಿತಿಸ್ಥಾಪಕ ಮತ್ತು ಹೆಚ್ಚಿನ ಪ್ರಮಾಣದ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಸುಗಮಗೊಳಿಸುತ್ತದೆ” ಎಂದು ಭಾರತದ ಸಂವಹನ ಖಾತೆಯ ರಾಜ್ಯ ಸಚಿವರಾದ ದೇವು ಸಿಂಗ್‌ ಚೌಹಾಣ್‌ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

“ಟೆಲಿಕಾಂ ಮೂಲಸೌಕರ್ಯವನ್ನು ವೇಗವಾಗಿ ಮತ್ತು ಸುಲಭವಾಗಿ ನಿಯೋಜಿಸಲು, ಸರ್ಕಾರವು ಅನೇಕ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಸರ್ಕಾರವು ಭಾರತೀಯ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳಿಗೆ ತಿದ್ದುಪಡಿಮಾಡಿದ್ದು ಈ ತಿದ್ದುಪಡಿಗಳು ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಅಸ್ತಿತ್ವದಲ್ಲಿರುವ ರಸ್ತೆ ಮೂಲಸೌಕರ್ಯಗಳಲ್ಲಿ ನಿಯೋಜಿಸಲು ದಾರಿ ಮಾಡಿಕೊಡುತ್ತವೆ” ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!