ASIAN GAMES 2023 | ಭಾರತಕ್ಕೆ ‘ಶತಕ ಪದಕ’ ಸಂಭ್ರಮ, ಕ್ರೀಡಾಪಟುಗಳ ಜತೆ ಸಂವಾದಕ್ಕೆ ಉತ್ಸುಕರಾದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳ ದಾಖಲೆ ಮಾಡಿದೆ.

ಈವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳನ್ನು ಬಾಚಿಕೊಂಡಿರಲಿಲ್ಲ, ಇದೀಗ ಕಬಡ್ಡಿ ವುಮೆನ್ ಟೀಮ್ ಚಿನ್ನದ ಪದಕ ಗಳಿಸಿದ್ದು, ಭಾರತದ ಪದಕಗಳ ಸಂಖ್ಯೆ ನೂರಾಗಿದೆ.

2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಯ 70 ಪದಕಗಳನ್ನು ಭಾರತ ಗೆದ್ದಿತ್ತು. ಇದೀಗ ತನ್ನದೇ ದಾಖಲೆಯನ್ನು ಭಾರತ ಮೀರಿದ್ದು, 100 ಪದಕಗಳ ಶತಕ ಸಂಭ್ರಮದಲ್ಲಿದೆ.

ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಭಾರತ ಮಹತ್ವದ ಸಾಧನೆ ಮಾಡಿದೆ. 100 ಮೆಡಲ್‌ಗಳನ್ನು ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ದೇಶದ ಜನರು ರೋಮಾಂಚನಗೊಂಡಿದ್ದಾರೆ. ನಾನು ತುಂಬಾ ಉತ್ಸುಕನಾಗಿದ್ದೇನೆ, ಏಷ್ಯನ್ ಗೇಮ್ಸ್‌ನ ಹೊಸ ಭವಿಷ್ಯ ಬರೆದ ನಮ್ಮ ಕ್ರೀಡಾಪಟುಗಳಿಗೆ ತುಂಬು ಹೃದಯದ ಅಭಿನಂದನೆಗಳು. ಪ್ರತಿ ವಿಸ್ಮಯಕಾರಿ ಪ್ರದರ್ಶನ ಹೋರಾಟ ಇತಿಹಾಸ ನಿರ್ಮಾಣ ಮಾಡಿದೆ. ಇದೇ ಅಕ್ಟೋಬರ್ 10ರಂದ ಎಲ್ಲಾ ಕ್ರೀಡಾಪಟುಗಳ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!