ಭಾರತದಲ್ಲಿ ಮೂರನೇ ಹೈಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು: ಎರಡನೇ ವೇಗ ಪರೀಕ್ಷೆಯೂ ಯಶಸ್ವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಲ್ಲಿ ಮೂರನೇ ವಂದೇ ಭಾರತ್‌ ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ರೈಲು ಕಾರ್ಯಾರಂಭ ಮಾಡಲಿರುವ ಕುರಿತು ನಿರೀಕ್ಷೆಗಳು ಹುಟ್ಟಿಕೊಂಡಿರುವ ಬೆನ್ನಲ್ಲೇ ಇದೀಗ ಭಾರತೀಯ ರೈಲ್ವೇಯು ಈ ಕುರಿತು ಹೊಸ ಸುದ್ದಿಯನ್ನು ಹೊರಹಾಕಿದ್ದು ಮೂರನೇ ವಂದೇ ಭಾರತ್‌ ರೈಲಿನ ಎರಡನೇ ವೇಗ ಪರೀಕ್ಷೆಯು ಯಶಸ್ವಿಯಾಗಿರುವುದಾಗಿ ಹೇಳಿದೆ.

ಈ ಕುರಿತು ರೇಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಟ್ವೀಟ್‌ ಮಾಡಿದ್ದು ಪ್ರಯೋಗದ ವೀಡಿಯೊವನ್ನು ರೈಲ್ವೆ ಸಚಿವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬದಲಿಗೆ ಮತ್ತು ಶತಾಬ್ದಿಯಂತೆಯೇ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ ಎನ್ನಲಾಗಿದೆ.

ಕೋಟಾ-ನಾಗ್ಡಾ ವಿಭಾದಲ್ಲಿ ಪ್ರಯೋಗ ನಡೆಸಲಾಗಿದ್ದು ರೈಲನ್ನು ಗಂಟೆಗೆ 120, 130, 150 ಮತ್ತು 180 ಕಿಮೀ ವೇಗದಲ್ಲಿ ನಡೆಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಲ್ಲಿ ತಯಾರಿಸಲಾಗುತ್ತಿದ್ದು ಇದು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ವಿಶೇಷ ಬ್ರೇಕಿಂಗ್ ಸಿಸ್ಟಮ್ ಅನ್ನು ಸ್ಥಾಪಿಸಲಾಗಿದೆ. ಅಲ್ಲದೇ ಈ ರೈಲು ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

ವರದಿಗಳ ಪ್ರಕಾರ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅಹಮದಾಬಾದ್ ಮತ್ತು ಮುಂಬೈ ನಡುವೆ ಕಾರ್ಯನಿರ್ವಹಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!